Saturday, November 23, 2024
ಸುದ್ದಿ

ದೇವಾಲಯಗಳಲ್ಲಿ ಸಂಗ್ರಹವಾದ ಸೀರೆ, ಮತ್ತಿತರ ವಸ್ತುಗಳನ್ನು ಸಂತ್ರಸ್ತರಿಗೆ ನೀಡಲು ಸರ್ಕಾರ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ನೆರೆ ಸಂತ್ರಸ್ತರಿಗೆ ಧಾರ್ಮಿಕ ದತ್ತಿ ಇಲಾಖೆ ನೆರವು ನೀಡಲು ಮುಂದಾಗಿದ್ದು, ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಭಕ್ತರಿಂದ ಹರಕೆ ರೂಪದಲ್ಲಿ ಸಂಗ್ರಹಸಿರುವ ಸೀರೆ, ಮತ್ತಿತರ ವಸ್ತುಗಳನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ.

ಸಂತ್ರಸ್ತರಿಗೆ ನೆರವಾದ ದೇವಾಲಯಗಳು ಈ ಸಂಬಂಧ ಸರ್ಕಾರ ಆದೇಶ ಹೊರಡಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರನ್ವಯ ಸರ್ಕಾರ ಆದೇಶ ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ತಗುಲುವ ಸಾಗಾಣಿಕೆ ವೆಚ್ಚವನ್ನು ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಿ ದೇವಾಲಯಗಳ ನಿಧಿಯಿಂದ ಭರಿಸಲು ಸೂಚನೆ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ಹರಕೆ ರೂಪದಲ್ಲಿ ಸಂಗ್ರಹಿಸಿರುವ ಸೀರೆಗಳನ್ನು ನೆರೆ ಸಂತ್ರಸ್ತರಿಗೆ ನೀಡಲು ಮುಂದಾಗಿವೆ. ಉದ್ಯಮಿಗಳು, ಚಿತ್ರರಂಗದ ಖ್ಯಾತರು ನಟ-ನಟಿಯರು, ದಾನಿಗಳು, ಹಲವು ಮಠಮಾನ್ಯಗಳು ಸೇರಿದಂತೆ ಸಾರ್ವಜನಿಕರೂ, ವಿದ್ಯಾರ್ಥಿಗಳು ಕೂಡ ನೆರೆ ಸಂತ್ರಸ್ತರಿಗೆ ನೆರವಾಗಲು ನಾಡಿನಾದ್ಯಂತ ಸಹಾಯದ ಮಹಾಪೂರವೇ ಹರಿದುಬರುತ್ತಿದೆ.