Tuesday, January 21, 2025
ಸುದ್ದಿ

ರಕ್ಷಣೆ ವೇಳೆ ಮುಗುಚಿದ ಬೋಟ್: 12 ಕಿ.ಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್ ಕುಮಾರ್ – ಕಹಳೆ ನ್ಯೂಸ್

ಕೊಪ್ಪಳ: ಹಂಪಿಯ ವಿರೂಪಾಪುರ ನಡುಗಡ್ಡೆಯಲ್ಲಿ “ಸಿಲುಕಿದ್ದವರ” ರಕ್ಷಿಸಲು ತೆರಳಿದ ಎನ್‍ಡಿಆರ್‍ಎಫ್ ದೋಣಿ ನೀರಿನ ಪ್ರವಾಹದ ರಭಸಕ್ಕೆ ಮಗುಚಿ ರಕ್ಷಣಾ ಸಿಬ್ಬಂದಿ ನೀರು ಪಾಲಾಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

ದೋಣಿ ಮುಳುಗಿದ ಪರಿಣಾಮ ಐವರು ರಕ್ಷಣಾ ಸಿಬ್ಬಂದಿ ನೀರುಪಾಲಾಗಿದ್ದರು. ಅವರಲ್ಲಿ ಒಬ್ಬರು ಈಜಿ ದಡ ಸೇರಿದ್ದರು. ಉಳಿದವರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್ ನೆರವು ಕೋರಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಲಿಕಾಪ್ಟರ್ ಮೂಲಕ ಶೋಧನೆ ನಡೆಸಿದಾಗ ನಾಲ್ವರು ರಕ್ಷಕರು ದೋಣಿ ಮುಳುಗಿದ ಸ್ಥಳದಲ್ಲಿಯೇ ಗಿಡವನ್ನು ಆಶ್ರಯಿಸಿ ನೀರಿನ ರಭಸದ ನಡುವೆಯೂ ಮೂರು ತಾಸುಗಳು ರಕ್ಷಣೆಗಾಗಿ ಕಾದಿದ್ದರು. ಬಳಿಕ ಅವರನ್ನೆಲ್ಲ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಮತ್ತೋರ್ವ ಎನ್‍ಡಿಆರ್‍ಎಫ್ ಸಿಬ್ಬಂದಿ ಕೊಚ್ಚಿಕೊಂಡು ಹೋಗಿದ್ದು ಆತನಿಗಾಗಿ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸಿದಾಗ ಬೋಟ್ ಮುಳುಗಿದ 12 ಕಿ.ಮೀ ದೂರ ನೀರಿನ ರಭಸದ ಜೊತೆ ಈಜಿ ಕಮಾಂಡರ್ ಚೇತನ್‍ಕುಮಾರ್ ದಡ ಸೇರಿದ್ದಾರೆ. ಮತ್ತೆ ಜನರನ್ನು ರಕ್ಷಿಸಲು ಸಿದ್ಧನೆಂದು ವೀಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.