Recent Posts

Sunday, January 19, 2025
ಸುದ್ದಿ

ಮಹಾ ಮಳೆ ಹಿನ್ನೆಲೆ; ಮಂಗಳೂರು ಕೆಎಸ್‍ಆರ್‍ ಟಿಸಿಗೆ 1 ಕೋಟಿ ನಷ್ಟ: ಮಂಗಳೂರು- ಪುಣೆ ಬಸ್ ಪುನರಾರಂಭ – ಕಹಳೆ ನ್ಯೂಸ್

ಸುರತ್ಕಲ್: ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹದ ಕಾರಣದಿಂದ ರದ್ದಾಗಿದ್ದ ಮಂಗಳೂರು- ಪುಣೆ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಮಂಗಳವಾರದಿಂದ ಪುನರಾರಂಭವಾಗಿದೆ ಎಂದು ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗ ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್ ಅವರು ಹೇಳಿದ್ದಾರೆ.

ಮಂಗಳೂರು, ಉಡುಪಿ, ಕುಂದಾಪುರ ವಿಭಾಗದಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಕೊಲ್ಲಾಪುರಕ್ಕೆ ಬಸ್ ಸಂಚಾರವಿದ್ದು, ಪ್ರವಾಹದ ಕಾರಣದಿಂದ ಇದನ್ನು ಕೆಲ ದಿನಗಳ ಮಟ್ಟಿಗೆ ರದ್ದು ಮಾಡಲಾಗಿತ್ತು. ಈಗ ಪುಣೆಗೆ ಸುಗಮ ಸಂಚಾರಕ್ಕೆ ಅನುಮತಿ ದೊರೆತ ಕಾರಣ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ. ಆದರೆ ಮುಂಬೈ ಮತ್ತು ಕೊಲ್ಲಾಪುರಕ್ಕೆ ಬಸ್ ಪುನರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆ ಮತ್ತು ಘಟ್ಟ ಪ್ರದೇಶಗಳ ಗುಡ್ಡ ಕುಸಿತದಿಂದಾಗಿ ಕೆಎಸ್‍ಆರ್ ಟಿಸಿಗೆ ಭಾರೀ ನಷ್ಟವಾಗಿದೆ. ಶಿರಾಡಿ, ಚಾರ್ಮಾಡಿ ಘಾಟಿ ಬಂದ್ ಆಗಿದ್ದ ಕಾರಣ ಸುಮಾರು 265 ಶೆಡ್ಯೂಲ್‍ಗಳನ್ನು ರದ್ದುಗೊಳಸಿಲಾಗಿದೆ. ಇದರಿಂದಾಗಿ ಮಂಗಳೂರು ವಿಭಾಗಕ್ಕೆ ಒಂದು ಕೋಟಿಗೂ ಹೆಚ್ಚಿನ ನಷ್ಟವಾಗಿದೆ ಎಂದು ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್ ಅವರು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು