Sunday, January 19, 2025
ಸುದ್ದಿ

ಸಿದ್ದರಾಮಯ್ಯಗೆ ಕೃಷ್ಣ ಮಠಕ್ಕೆ ಬರಲು ಮನಸ್ಸಿದೆ | ಶ್ರೀಕೃಷ್ಣನೇ ಬರುವಂತೆ ಮಾಡುತ್ತಾನೆ – ಪರ್ಯಾಯ ಪಲಿಮಾರು ಶ್ರೀ

 

ಉಡುಪಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರಲು ಮನಸ್ಸಿದೆ ಆದರೆ ಮಧ್ಯ ತೆಡೆ ಹಾಕುವವರು ಇದ್ದಾರೆ’ ಆದರೆಣ ಶ್ರೀಕೃಷ್ಣನೇ ಅವರನ್ನು ಬರುವಂತೆ ಮಾಡುತ್ತಾನೆ ಎಂದು ಪರ್ಯಾಯ ಪಲಿಮಾರು ಶ್ರೀಗಳಾದ ವಿದ್ಯಾಧೀಶ ತೀರ್ಥ ಶ್ರೀಗಳು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಬೆಳಗ್ಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಉಪಸ್ಥಿತರಿದ್ದ ಗಣ್ಯರನ್ನು ಅಭಿನಂದಿಸುತ್ತಾ ‘ನಾವು ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೂ ಆಮಂತ್ರಣ ನೀಡಿದ್ದೆವು. ಪೇಜಾವರ ಶ್ರೀಗಳು ಹೇಳಿದಂತೆ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರಲು ಮನಸ್ಸಿದೆ, ಆದರೆ ಮಧ್ಯ ತಡೆ ಇದೆ. ಮುಂದಿನ ದಿನಗಳಲ್ಲಿ ಅವರೂ ಬರುವ ವಿಶ್ವಾಸ ನಮ್ಮದು’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಪರ್ಯಾಯ ಅವಧಿಯಲ್ಲಿ ನಾನು ಬೀಗುವುದು ಯಾಕೆಂದರೆ 8 ಪರ್ಯಾಯ ಗಳನ್ನು ಮುಗಿಸಿರುವ ಪೇಜಾವರ ಶ್ರೀಗಳು ಮುಟ್ಟಿ ಕೊಟ್ಟಿರುವುದರಿಂದ ನನಗೂ ಮಹತ್ವ ಬಂತು. ಎಲ್ಲದರಲ್ಲಿಯೂ ಪ್ರವೇಶ ಪಡೆದ ಶ್ರೀಪಾದರು  ದಾಖಲೆ ಮಾಡಿದ್ದು, ಪರ್ಯಾಯ ಹೇಗೆ ಮಾಡಬೇಕು ಎಂಬ ಆದರ್ಶವನ್ನು ನಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರು ಜ್ಞಾನದ ಬೆಂಕಿ , ಅವರ ಪಕ್ಕದಲ್ಲಿ ಕೂತರೆ ವಿಶೇಷ ಶಕ್ತಿ ಪಡೆಯಬಹುದಾಗಿದೆ. ಪೂಜ್ಯರು ಮಾಡಿದ ಸೇವೆಯನ್ನು ಅನುಸಂಧಾನ ಮಾಡಲು ನಾವು ಸೇವೆ ಮಾಡಬೇಕಿದೆ’ ಎಂದರು.

ದರ್ಬಾರ್‌ ವೇದಿಕೆಯಲ್ಲಿ ಪೇಜಾವರ ಶ್ರೀ ಸೇರಿದಂತೆ 7 ಮಠಗಳ ಯತಿಗಳು, ಗಣ್ಯರ ಸಾಲಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಜೆಡಿಎಸ್‌ ನಾಯಕ ಪಿಜಿಆರ್‌ ಸಿಂಧ್ಯಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪರ್ಯಾಯ ಸಂಭ್ರಮದ ವೇಳೆ ಉಡುಪಿಯಲ್ಲಿ ಬುಧವಾರ ಸಂಜೆಯಾಗುತ್ತಲೇ ಜನಸಾಗರವೇ ಕಾಣಿಸಿಕೊಂಡಿತ್ತು. ಕರಾವಳಿ ಮಾತ್ರವಲ್ಲದೆ, ಹೊರಜಿಲ್ಲೆಗಳ, ರಾಜ್ಯಗಳ ಭಕ್ತರು ಉಡುಪಿಗೆದೌಡಾಯಿಸಿದ್ದರು. ಉಡುಪಿ ನಗರದಸುತ್ತಮುತ್ತ ವಿಶೇಷ ಸಾಂಸ್ಕೃತಿಕಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಆರಂಭಗೊಂಡಿದ್ದುಬೆಳಗಿನ 3 ಗಂಟೆಯ ವರೆಗೂ ನಡೆದವು. ಹೆಚ್ಚಿನ ಕಡೆ ಕಾಲು ಹಾಕುವುದಕ್ಕೂಜಾಗವಿಲ್ಲದಷ್ಟು ಜನ ಸೇರಿದ್ದರು. ಉಡುಪಿ ನಗರದೊಳಗೆ ವಾಹನಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿತ್ತು. ಬಿಗು ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Leave a Response