Sunday, November 24, 2024
ಸುದ್ದಿ

ಫಿಲೋಮಿನಾ ಸ್ನಾತಕೋತ್ತರ ವಿದ್ಯಾರ್ಥಿಗಳ ಸಮ್ಮರ್ ರಿಸರ್ಚ್ ಸಾಧನೆ- ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ 2019-20 ಸಾಲಿನಲ್ಲಿ ವಿವಿಧ ಸಂಸ್ಥೆಗಳಲ್ಲಿ ಸಮ್ಮರ್ ರಿಸರ್ಚ್ ಪ್ರಾಜೆಕ್ಟ್‍ಗಳನ್ನು ಕೈಗೊಂಡು ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಬೆಂಗಳೂರಿನ ಎಮ್ ಪಿ ಬಿರ್ಲಾ ರಿಸರ್ಚ್ ಸೆಂಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಿಯಲತಾ ಎಮ್, ಅನುಶಾ ಕೆ, ಸಹನಾ ಎಲ್. ಎನ್ ಮತ್ತು ಎಝಿತಾ ಮೊಂತೆರೊ ತುಷಾರ ಆರ್ ಬಿ, ಪ್ರಮಿತಾ ಎ, ದಿವ್ಯಶ್ರೀ, ಅಕ್ಷತಾ ಜಿ ಮತ್ತು ಡೆಲ್ವಿಟಾ ವೇಗಸ್ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ, ನಮಿತಾ ಡಿ, ಪೂಜಾಶ್ರೀ ವಿ ರೈ, ಅನುಶಾ ಕೆ ಎನ್ ಮತ್ತು ದೀಕ್ಷಿತಾ ಬೆಂಗಳೂರಿನ ಜೈನ್ ಯುನಿರ್ವಸಿಟಿಯ ಸೆಂಟರ್ ಫಾರ್ ನ್ಯಾನೊ ಅಂಡ್ ಮೆಟೀರಿಯಲ್ ಸೈನ್ಸ್ ನಲ್ಲಿ ರಮ್ಯಶ್ರೀ ಮತ್ತು ಪಿ ಮಿಥುನ ಗದಗದ ಸೆಂಟ್ರಲ್ ಯುನಿರ್ವಸಿಟಿ ಆಫ್ ಕರ್ನಾಟಕದಲ್ಲಿ, ಕೀರ್ತನಾ ಕೆ ಎಸ್, ಆಷ್ನ ಪಿ ವಿ ಮತ್ತು ಆದಿರ ವಿ ಬೆಂಗಳೂರಿನ ಇನ್ನೊವೇಟಿವ್ ನ್ಯಾನೊ ಅಂಡ್ ಮೈಕ್ರೊ ಟೆಕ್ನೋಲಜಿಸ್‍ನಲ್ಲಿ, ಅಪರ್ಣಾ, ಶಯನಾ ಕೆ, ಅಮೃತ ಸಿ, ಬೇಬಿ ಆದಿರ ಸಾಧನೆಗೈದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಬಿಷಪ್ ಮೂರೆ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ, ನಿತ್ಯ ಕೆ ನಾಯರ್ ಬೆಂಗಳೂರಿನ ಸಿಎಸ್‍ಐಆರ್-ಎನ್‍ಎಎಲ್ ಹಾಗೂ ಇಂದೋರ್‍ನ ಯುಜಿಸಿ-ಡಿಎಇ ಕನ್ಸೋರ್ಟಿಯಮ್ ಫಾರ್ ಸೈಂಟಿಫಿಕ್ ರಿಸರ್ಚ್‍ನಲ್ಲಿ ಸುಜಿತ್ ಎಸ್ ತಮ್ಮ ಸಂಶೋಧನಾತ್ಮಕ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ, ಸ್ನಾತಕೊತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಎಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ವಿಭಾಗ ಸಂಯೋಜಕ ಡಾ. ಇ ದೀಪಕ್ ಡಿ’ಸಿಲ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.