ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆನೆ ಜ್ವರದಿಂದ ಸಾವನ್ನಪ್ಪಿದೆ. ಜ್ವರದಿಂದ ಬಳಲುತ್ತಿದ್ದರೂ ಕೂಡ ಮಾವುತ ಹಾಗೂ ದೇವಾಲಯದ ಆಡಳಿತಮಂಡಳಿ ಆನೆಯ ಮೇಲೆ ವಿಶೇಷವಾದ ಮುತುವರ್ಜಿಯನ್ನು ವಹಿಸಿಕೊಂಡಿರಲಿಲ್ಲ ಎಂದು ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಮೂಲದ ಟಿಂಬರ್ ಮರ್ಚೆಂಟ್ ಇಂದಿರಾ ಹೆಸರಿನ ಈ ಆನೆಯನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಆದರೆ, ಇದೀಗ ಏಕಾಏಕಿ ತೀವ್ರ ಜ್ವರದಿಂದ ಇಂದಿರಾ ಸಾವನ್ನಪ್ಪಿದೆ.
50 ವರ್ಷದ ಪ್ರಾಯ ಇಂದಿರ 22 ವರ್ಷಗಳಿಂದ ಕೊಲ್ಲೂರಿನಲ್ಲಿ ವಾಸವಾಗಿದ್ದು, ಕಳೆದ 10ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ದೇವಸ್ಥಾನ ಆಡಳಿತ ಮಂಡಳಿಯ ನಿರ್ಲಕ್ಷ್ಯತನದಿಂದ ಆನೆ ಸಾವನ್ನಪ್ಪಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಇನ್ನು ಇಂದಿರಾ ಆನೆಯ ಸಾವಿನಿಂದಾಗಿ ಬುಧವಾರದಂದು ಸ್ವಯಂ ಘೋಷಿತ ಕೊಲ್ಲೂರು ಬಂದ್‍ಗೆ ಸ್ಥಳೀಯ ಜನ ಕರೆಕೊಟ್ಟಿದ್ದಾರೆ.