ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ.
ಕಾಶಿನಾಥ್ ಅವರು ವಿಜಯಾ ಕಾಲೇಜಿನಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದ್ರು. ನಂತರ ಅಸಿಮಾ ಎಂಬ ಫಿಲ್ಮಂ ಸೆಂಟರ್ ಗೆ ಸೇರಿಕೊಂಡರು. 1975ರಲ್ಲಿ ಕಾಶಿನಾಥ್ ಅವರು ಅಪರೂಪದ ಅಥಿತಿಗಳು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟರು. ನಂತರ 1978ರಲ್ಲಿ ಸಸ್ಪೆನ್ಸ್ ಥ್ರೀಲ್ಲರ್ ಆದ ಅಪರಿಚಿತ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರ ಯಶಸ್ವಿಯಾಯ್ತು. ಆ ಚಿತ್ರವನ್ನು ಬೀ-ಶೇಕ್ ಎಂದು ಹೆಸರಿಟ್ಟು ಹಿಂದಿಯಲ್ಲಿ ಕೂಡ ನಿರ್ದೇಶನ ಮಾಡಿದ್ದರು.
ಅಪರಿಚಿತ ಚಿತ್ರದ ನಂತರ ಕಾಶಿನಾಥ್ ಅವರು 16 ಸಿನಿಮಾಗಳನ್ನ ಒಟ್ಟಿಗೆ ನಿರ್ದೇಶಿಸಿದ್ದು, ಆ ಚಿತ್ರಗಳೆಲ್ಲಾ ಸಾಕಷ್ಟು ಹಿಟ್ ಆಗಿದ್ದವು. 1984ರಲ್ಲಿ ಮೊದಲ ಬಾರಿಗೆ ಕಾಶಿನಾಥ್ ಅವರು ಅನುಭವ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಅವರಿಗೆ ಅಭಿನಯ ಹಾಗೂ ಉಮಾಶ್ರೀ ನಾಯಕಿಯರಾಗಿ ಸಾಥ್ ನೀಡಿದ್ದರು. ಅನುಭವ ಚಿತ್ರ ಕನ್ನಡದಲ್ಲಿ ಯಶಸ್ವಿ ಆಗುತ್ತಿದ್ದಂತೆ ಆ ಚಿತ್ರವನ್ನು ಹಿಂದಿಯಲ್ಲಿ ಅನುಭವ್ ಎಂಬ ಹೆಸರಲ್ಲಿ ನಿರ್ದೇಶನ ಮಾಡಿದ್ದರು. 2 ಹಿಂದಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.
1988ರಲ್ಲಿ ಅವಳೇ ನನ್ನ ಹೆಂಡ್ತಿ ಚಿತ್ರದಲ್ಲಿ ಟಾಪ್ ನಟಿ ಭವ್ಯ ಹಾಗೂ ತಾರಾ ಜೊತೆ ನಟಿಸಿದ್ದರು. ನಂತರ 1988ರಲ್ಲಿ ಅವನೇ ನನ್ನ ಗಂಡ, ಮನ್ಮಥ ರಾಜ ಹಾಗೂ 1990ರಲ್ಲಿ ಚಪಲ ಚನ್ನಿಗರಾಯ ಎಂಬ ಹಾಸ್ಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 1993ಯಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ್ದ ಶ್…! ಹಾಗೂ ಹಲೋ ಯಮ ಚಿತ್ರದಲ್ಲಿ ಕಾಶಿನಾಥ್ ನಟಿಸಿದ್ದರು.
ಕಾಶಿನಾಥ್ ಅವರು ತಮ್ಮ ಸಿನಿಮಾ ಜೀವನದಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿರಂತಹ ಪ್ರತಿಭೆಗಳಿಗೆ ಸ್ಯಾಂಡಲ್‍ವುಡ್ ನಲ್ಲಿ ಅವಕಾಶ ನೀಡಿದ್ದಾರೆ. ಫೆಬ್ರವರಿ 3, 2017ರಲ್ಲಿ ತೆರೆಕಂಡ ಚೌಕ ಚಿತ್ರದಲ್ಲಿ ಕಾಶಿನಾಥ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಚಿತ್ರ.