Sunday, November 24, 2024
ಸುದ್ದಿ

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‍ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ- ಕಹಳೆ ನ್ಯೂಸ್

ನವದೆಹಲಿ: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಯೋಧ ಅಭಿನಂದನ್ ವರ್ತಮಾನ್ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಫೆ.27 ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಮಿಗ್-21 ನ್ನು ಹೊಡೆದುರುಳಿಸಿ ಅಪಾಯ ಸನ್ನಿವೇಶವನ್ನು ಎದುರಿಸಿ ಪಾರಾಗಿ ಬಂದಿದ್ದ ವೀರ ಯೋಧ ಅಭಿನಂದನ್. ಹಳೆಯ ಮಿಗ್-21 ಯುದ್ಧವಿಮಾನದಿಂದ ಅತ್ಯಾಧುನಿಕ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಸಾಹಸಕ್ಕೆ ತಜ್ಞರು ಬೆರಗಾಗಿದ್ದರು. ಪರಮ ವೀರ ಚಕ್ರ, ಮಹಾ ವೀರ ಚಕ್ರದ ನಂತರ ಯೋಧರ ಸಾಹಸ, ಶೌರ್ಯಗಳನ್ನು ಗುರುತಿಸಿ ನೀಡಲಾಗುವ 3ನೇ ಅತಿ ಶ್ರೇಷ್ಠ ಪ್ರಶಸ್ತಿ ವೀರ ಚಕ್ರವಾಗಿದ್ದು ಅಭಿನಂದನ್ ಗೆ ಪ್ರದಾನವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು