Sunday, January 19, 2025
ಸುದ್ದಿ

ಇನ್ನರ್ ವೀಲ್ ಕ್ಲಬ್ ನ ಜಿಲ್ಲಾಧ್ಯಕ್ಷೆ ಪುತ್ತೂರಿಗೆ ಭೇಟಿ, ಆಂಜನೇಯ ವೃತ್ತದ ಉದ್ಘಾಟನೆ ಮತ್ತು ಹಲವು ಸಾಮಾಜಿಕ ಕಾರ್ಯ-ಕಹಳೆ ನ್ಯೂಸ್

ಪುತ್ತೂರು:

ಇನ್ನರ್ ವೀಲ್ ಕ್ಲಬ್ ಇದರ ಜಿಲ್ಲಾಧ್ಯಕ್ಷೆ ಯಾದ ಅನುರಾಧ ನಂದಕುಮಾರ್ ಇವರ ಭೇಟಿಯ ಹಿನ್ನಲೆಯಲ್ಲಿ ಕ್ಲಬ್ ನ ವತಿಯಿಂದ ಬೊಳುವಾರು ಜಂಕ್ಷನ್ ನ ಬಳಿ ಇನ್ನರ್ ವೀಲ್ ಕ್ಲಬ್ ನ ವತಿಯಿಂದ ನಿರ್ಮಿಸಲಾದ ನೂತನ ಆಂಜನೇಯ ವೃತ್ತ ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಇಂದು ಮುಂಜಾನೆ ಮಹಾಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ನಂತರ ಸರ್ಕಾರಿ ಆಸ್ಪತ್ರೆಗೆ 2ವೀಲ್ ಚೇರ್ ನ ಕೊಡುಗೆ ಕಾರ್ಯಕ್ರಮ ನೆರವೇರಿತು. ನಂತರ ಪ್ರಜ್ಞಾ ನರಮನಸಿಕ ಕೇಂದ್ರಕ್ಕೆ ಭೇಟಿ ನೀಡಿ ಸುಮಾರು 15ಮಂದಿಗೆ ಇಂದಿನ ದಿನದ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ನಡೆಸಿಕೊಟ್ಟರು. ಇಲ್ಲಿಂದ ಮುಂದಕ್ಕೆ ಕೊಡಿಂಬಾಡಿ ಮತ್ತು ಮಠಂತಬೆಟ್ಟು ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿದ್ದ 10ಬಾಕ್ಸ್, 15 ಮಕ್ಕಳ ಚೇರ್ ಮತ್ತು ತಲಾ ಒಂದರಂತೆ ಗೋಡ್ರೆಜ್ ನೀಡಲಾಯಿತು. ಇಲ್ಲಿಂದ ಮುಂದಕ್ಕೆ ಪುತ್ತೂರು ಶಾಸಕರಾದ ಸಂಜೀವ ಮಾಠಂದೂರು ಇವರು ಬೊಳುವಾರಿನಲ್ಲಿ ನೂತನವಾಗಿ ನಿರ್ಮಿಸಲಾದ ಆಂಜನೇಯ ವೃತ್ತವನ್ನು ಉದ್ಘಾಟಿಸಿದರು. ಈ ವೇಳೆ ಪೌರಾಯುಕ್ತೆ ರೂಪ. ಟಿ. ಶೆಟ್ಟಿ, ಇನ್ನರ್ ವೀಲ್ ನ ಅಧ್ಯಕ್ಷೆ ಸಹನಾ ಭಾವಿನ್, ನಗರಸಭಾ ಸದಸ್ಯರಾದ ಜಗನ್ನಿವಾಸ್ ರಾವ್ ಮತ್ತು ವಿದ್ಯಾಗೌರಿ ಹಾಗೂ ತಾಲೂಕು ಪಂಚಾಯತ್ ನ ರಾಧಾಕೃಷ್ಣ ಬೋರ್ಕರ್ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು