ಬಂಟ್ವಾಳ: ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಮೇಲಿನ ನಿರ್ಬಂಧ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಬಂಟ್ವಾಳ ತಾಲೂಕಿನ ತಹಶೀಲ್ದಾರರಿಗೆ ಮನವಿಯನ್ನು ನೀಡಲಾಯಿತು.
ಹಿಂದೂ ಜನಜಾಗೃತಿ ಸಮಿತಿಯು ಈ ದಿಶೆಯಿಂದ ಕಳೆದ 16 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರಧ್ವಜದ ನಿಯಮಗಳಿಗೆ ಕುತ್ತು ಬಾರದಂತೆ ಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿ ಮುಂದಾಗಿದೆ.
ಈ ಹಿನ್ನಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಂದಾಯ ಇಲಾಖೆ ಅಧಿಕಾರಿಯಾದ ಪ್ರಸನ್ನ ಪಕ್ಕಳ, ಮತ್ತು ಶಾಲಾ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಗೆ, ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಜಿತ್, ಕಿರಣ್, ಪಾಲಕ್ಷ, ರಾಧ ಕೃಷ್ಣ ಮತ್ತು ದಿನೇಶ್ ಕಂಡಿಗ, ವಿಜಿತ್, ಮನೋರಾಜ್ ಶೆಟ್ಟಿ ಮಂಚಿ ಗುತ್ತು ಮತ್ತಿತರು ಉಪಸ್ಥಿತರಿದ್ದರು.
ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ 15 ಅಗಸ್ಟ ಮತ್ತು 26 ಜನೆವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ. ಆದರೆ ಇದೇ ಕಾಗದ ಅಥವಾ ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ.
ಪ್ಲಾಸ್ಟಿಕ್‍ನಿಂದ ತಯಾರಾದ ರಾಷ್ಟ್ರ ಧ್ವಜವಂತೂ ನಾಶವೂ ಆಗುವುದಿಲ್ಲ, ಇದರಿಂದ ಹಲವು ದಿನಗಳವರೆಗೆ ನಮಗೆ ಆ ರಾಷ್ಟ್ರ ಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ. ರಾಷ್ಟ್ರ ಧ್ವಜದ ಈ ರೀತಿಯಲ್ಲಾಗುವ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು(ದಾವೆ ಸಂ. 103/2011) ಹೂಡಲಾಗಿದೆ.
ಇದರ ಬಗ್ಗೆ ಆಲಿಕೆಯನ್ನು ಮಾಡುತ್ತ ನ್ಯಾಯಾಲಯವು ಪ್ಲಾಸ್ಟಿಕ್‍ನ ರಾಷ್ಟ್ರಧ್ವಜದ ಅಗೌರವವನ್ನು ತಡಗಟ್ಟಲು ಸರ್ಕಾರಕ್ಕೆ ಆದೇಶವನ್ನು ಕೊಡಲಾಗಿತ್ತು ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ.
ಇತ್ತೀಚಿನ ದಿನದಲ್ಲಿ ಸರ್ಕಾರವು `ಪ್ಲಾಸ್ಟಿಕ್ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕ್‍ನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಉಚ್ಚ ನ್ಯಾಯಾಲಯವು ವಿಶೇಷವಾಗಿ ಸರ್ಕಾರಕ್ಕೆ ಆದೇಶವನ್ನು ಕೊಡುವುದರ ಮೂಲಕ ಸರ್ಕಾರವು ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕಾಪಾಡಲು ಕೃತಿ ಸಮಿತಿಗಳನ್ನು, ಸ್ಥಳಿಯ ಸ್ವಯಂಸೇವಾ ಸಂಸ್ಥೆಗಳನ್ನು ಸೇರಿಸಿ ಮಾಡಬೇಕು ಈ ಉಪಕ್ರಮದ ಅಂತರ್ಗತದಲ್ಲಿ ಪ್ಲಾಸ್ಟಿಕ್‍ನ ರಾಷ್ಟ್ರಧ್ವಜದ ಮಾಧ್ಯಮದಿಂದ ಆಗುವಂತಹ ಅಗೌರವವನ್ನು ತಡೆಗಟ್ಟಲು ವಿವಿಧ ಮಾಧ್ಯಮದಿಂದ ಜಾಗೃತಿಯನ್ನು ಮಾಡುವುದು ಅನಿವಾರ್ಯವಾಗಿದೆ.