Recent Posts

Sunday, January 19, 2025
ಸುದ್ದಿ

ಬಂಟ್ವಾಳದಲ್ಲೊಬ್ಬ ಆಪತ್ಭಾಂದವ – ಕಹಳೆ ನ್ಯೂಸ್

ಬಂಟ್ವಾಳ – ಮೊನ್ನೆ ಬಂದ ಪ್ರಳಯಾಂತಕ ಮಳೆಗೆ ನೆರೆ ಬಂದು ಅವಾಂತರ ಸೃಷ್ಟಿಸಿತ್ತು. ಮುಸ್ಲಿಂ ವ್ಯಾಪಾರಸ್ಥರೇ ಅಧಿಕವಾಗಿರುವ ಇಡೀ ಮಾರ್ಕೆಟ್ ಅನ್ನು ಖುದ್ದು ನಿಂತು ತನ್ನ ಸ್ವಂತ ಖರ್ಚಿನಲ್ಲಿ ಮೋಟಾರು ಹಾಕಿ ಸ್ವಚ್ಛಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೋಮು ಸೂಕ್ಷ ಪ್ರದೇಶ ಎಂದು ಕುಖ್ಯಾತಿ ಪಡೆದ ಬಂಟ್ವಾಳದಲ್ಲಿ ಒಬ್ಬ ಸೌಹಾರ್ದತೆಯ ಹರಿಕಾರ ಬಂಟ್ವಾಳ ಪೇಟೆಯ ಸಾರ್ವಜನಿಕರ, ವ್ಯಾಪಾರಸ್ಥರ ಪಾಲಿನ ಆಪತ್ಭಾಂದವ ರೆಂದೆ ಪ್ರಖ್ಯಾತರಾದ ಬಿಜೆಪಿ ಹಿರಿಯ ನಾಯಕ, ಕೌನ್ಸಿಲರ್ ಉದ್ಯಮಿ ಶ್ರೀಯುತ ಗೋವಿಂದ ಪ್ರಭು ಈ ಕಾರ್ಯ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಕಾರ್ಯ ವ್ಯಾಪ್ತಿಯಲ್ಲದಿದ್ದರೂ ಬಕ್ರೀದ್ ಹಬ್ಬಕ್ಕೆ ಯಾರಿಗೂ ತೊಂದರೆಯಾಗಬಾರದೆಂದೂ ಹಾಗೂ ವ್ಯಾಪಾರಿಗಳಿಗೆ ಆದ ನಷ್ಟದ ಪ್ರಮಾಣವನ್ನೂ ಶಾಸಕರಿಗೆ, ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಪರಿಹಾರ ಕೊಡುವಂತೆ ಒತ್ತಡ ಹಾಕಿದ್ದಾರೆ. ಬಂಟ್ವಾಳ ನಗರ (ಪೇಟೆ ಕೆಳಗಿನ ಪೇಟೆ) ಪರಿಸರದಲ್ಲಿ ಎಲ್ಲಿಯಾದರೂ ಅಹಿತಕರ ಘಟನೆ ನಡೆದರೆ ಖುದ್ದು ನಿಂತು ಪರಿಸ್ಥಿತಿಯನ್ನು ತಿಳಿಗೊಳಿಸಿ ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ ಈ ವ್ಯಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು