Recent Posts

Sunday, January 19, 2025
ಸುದ್ದಿ

ಚಂದ್ರಯಾನ-2 ಟಿಎಲ್‍ಐ ಪ್ರಕ್ರಿಯೆ ಯಶಸ್ವಿ, ಇಸ್ರೋ ಸಂತಸ – ಕಹಳೆ ನ್ಯೂಸ್

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹತ್ವಾಂಕಾಕ್ಷಿ ಚಂದ್ರಯಾನ-2 ಅಭಿಯಾನ ನಿರೀಕ್ಷೆಯಂತೆ ಪ್ರಗತಿಯಲ್ಲಿದ್ದು ಚಂದ್ರನಿಗೆ ಮತ್ತೊಂದು ಹಂತ ಹತ್ತಿರಕ್ಕೆ ಸಾಗಿದೆ.

ಬಾಹ್ಯಾಕಾಶ ನೌಕೆ ಭೂಕಕ್ಷೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಇಂದು ಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ-2 ಟ್ರಾನ್ಸ್ ಲೂನಾರ್ ಇಂಜೆಕ್ಷನ್(ಟಿಎಲ್‍ಐ-ಅಂತರ್ ಚಂದ್ರ ವಲಯ ಸೇಪರ್ಡೆ)ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಹರ್ಷ ವ್ಯಕ್ತಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರಾನ್ಸ್ ಲೂನಾರ್ ಇಂಜೆಕ್ಷನ್(ಟಿಎಲ್‍ಐ)ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನ ಕಕ್ಷೆಯತ್ತ ಸಾಗುವ ಪ್ರಕ್ರಿಯೆಯಾಗಿದ್ದು, ಆ.20 ರಂದು ಬಾಹ್ಯಾಕಾಶ ನೌಕೆ ಚಂದ್ರನನ್ನು ಸಮೀಪಿಸಲಿದೆ. ಸೆ.7 ರಂದು ಅಂತಿಮವಾಗಿ ಚಂದ್ರನ ದಕ್ಷಿಣ ಧ್ರುವವನ್ನು ಪ್ರವೇಶಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದ ಯಾವುದೇ ದೇಶ ಚಂದ್ರನ ಈ ವಲಯವನ್ನು ಈ ವರೆಗೆ ತಲುಪಲು ಸಾಧ್ಯವಾಗಿರಲಿಲ್ಲ. ಈ ವಿಷಯದಲ್ಲಿ ಭಾರತ ಮಹತ್ವ ಸಾಧನೆ ಮಾಡಿದೆ ಎಂದು ಇಸ್ರೋ ಮೆಚ್ಚಿಗೆ ಸೂಚಿಸಿದೆ.