Sunday, January 19, 2025
ಸುದ್ದಿ

ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ, ಮಳೆಯ ನಡುವೆಯೂ ಕೇಳಿ ಬಂತು ಜೈ. ಜೈ.. ಭಜರಂಗಿ ಘೋಷಣೆ.. -ಕಹಳೆ ನ್ಯೂಸ್

ಪುತ್ತೂರು :
ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ನೆರವೇರಿತು. ದರ್ಬೆ ವೃತ್ತದಿಂದ ಆರಂಭವಾದ ಮೆರವಣಿಗೆಯನ್ನು ವಿಶ್ವಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾ. ಕೆ. ಪ್ರಸನ್ನ ಅವರು ದೊಂದಿ ಪ್ರಜ್ವಲನೆ ಮೂಲಕ ನೆರವೇರಿಸಿದರು. ನಿರಂತರವಾಗಿ ಮಳೆ ಸುರಿಯುತ್ತಿದ್ದರು ಯಾವುದನ್ನೂ ಲೆಕ್ಕಿಸದೆ ಕಾರ್ಯಕರ್ತರು ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯ ಉದ್ದಕ್ಕೂ ಸಾಗಿದರು. ಮೆರವಣಿಗೆಯು ಪುತ್ತೂರು ಮುಖ್ಯರಸ್ತೆಯಲ್ಲಿ ಸಾಗಿ ಶ್ರೀಧರ್ ಭಟ್ ಮೇಲ್ಮಾರ್ಗ್ ವಾಗಿ ಕಿಲ್ಲೆಮೈದಾನದ ಅಮರ್ ಜವಾನ್ ಜ್ಯೋತಿ ಯ ಬಳಿ ಸಂಪನ್ನಗೊಂಡಿತು. ನಂತರ ಅಮರ್ ಜವಾನ್ ಜ್ಯೋತಿಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಅಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು ಇವರು ಸಭಾಕಾರ್ಯಕ್ರಮವನ್ನು ಉಧ್ಘಾಟಿಸಿದರು. ಹಿಂದೂ ಜಾಗರಣಾ ವೇದಿಕೆ ದಕ್ಷಿಣಪ್ರಾಂತದ ಕಾರ್ಯದರ್ಶಿಯಾದ ಶ್ರೀ ರಾಧಾಕೃಷ್ಣ ಅಡ್ಯಂತಾಯ ದಿಕ್ಷೂಚಿ ಭಾಷಣ ಮಾಡಿದರು. ಈ ವೇಳೆ ಸೈನಿಕರಾದ ಸೂರಜ್, ನಿವೃತ್ತ ಶ್ರೀ ಬಿ ಶೀನಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾ. ಕೆ. ಪ್ರಸನ್ನ, ಪ್ರಖಂಡ ಸಂಚಾಲಕರಾದ ಹರೀಶ್ ಕುಮಾರ್ ಡೊಲ್ಪಾಡಿ, ಶಶಿಕಾಂತ್ ಕೋರ್ಟ್ ರೋಡ್, ಅಜಿತ್ ರೈ ಹೊಸಮನೆ, ಶ್ರೀಧರ್ ತೆಂಕಿಲ ಮತ್ತಿತ್ತರರು ಉಪಸ್ಥಿತರಿದ್ದರು. ದಿನೇಶ್ ಪಂಜಿಗಾ ಸ್ವಾಗತ ಭಾಷಣ ಮಾಡಿ, ವಿಶಾಖ್ ರೈ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು