Recent Posts

Sunday, January 19, 2025
ಸುದ್ದಿ

ಭೂಮಿಗೆ ಗುಡ್‍ಬೈ ಹೇಳಿದ ಚಂದ್ರಯಾನ-2 ನೌಕೆ- ಕಹಳೆ ನ್ಯೂಸ್

ನವದೆಹಲಿ: ಕಳೆದ ತಿಂಗಳ 22ರಂದು ಉಡಾವಣೆಗೊಂಡಿದ್ದ ‘ಚಂದ್ರಯಾನ-2’ ನೌಕೆ ಭೂಮಿಯ ನಂಟನ್ನು ಸಂಪೂರ್ಣವಾಗಿ ಕಡಿದುಕೊಂಡು, ನಿಗದಿತ ಗುರಿಯಾದ ಚಂದ್ರನ ದಕ್ಷಿಣ ಧ್ರುವದತ್ತ ಪ್ರಯಾಣ ಆರಂಭಿಸಿದೆ.
ಇಸ್ರೋ ವಿಜ್ಞಾನಿಗಳ ತಂಡವು ‘ಟ್ರಾನ್ಸ್ ಲೂನಾರ್ ಇಂಜೆಕ್ಷನ್’ (ಟಿಎಲ್‍ಐ)ಅನ್ನು ಯಶಸ್ವಿಯಾಗಿ ನಡೆಸಿದ್ದು, ಮಂಗಳವಾರ ಚಂದ್ರಯಾನ ನೌಕೆಯು ಭೂಮಿಗೆ ಅಂತಿಮ ವಿದಾಯ ಹೇಳಿದೆ. ನೌಕೆಯು ಭೂಮಿಯ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. 22 ದಿನಗಳಿಂದ ಕಕ್ಷೆಯಲ್ಲಿದ್ದ ನೌಕೆಯ ದಿಕ್ಕನ್ನು ವಿಜ್ಞಾನಿಗಳು ಚಂದ್ರನತ್ತ ತಿರುಗಿಸಿದ್ದಾರೆ. ನೌಕೆಯ ದ್ರವ್ಯ ಎಂಜಿನ್ ಸುಮಾರು 1,203 ಸೆಕೆಂಡ್ ಕಾಲ ಉರಿದ ಬಳಿಕ ಚಂದ್ರನ ಪಥದತ್ತ ಧಾವಿಸಿತು.

”ಚಂದ್ರಯಾನ-2′ ನೌಕೆಯು ಚಂದ್ರ ಪಥದಿಂದ ಪ್ರಯಾಣಿಸಿ ಚಂದ್ರನ ಕಕ್ಷೆಗೆ ಆರು ದಿನಗಳ ಬಳಿಕ ಆಗಸ್ಟ್ 20ರಂದು ಸೇರಿಕೊಳ್ಳಲಿದೆ” ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ. ಚಂದ್ರನಿಗೂ ಮತ್ತು ಭೂಮಿಗೂ ಇರುವ ಅಂತರ 3.84 ಲಕ್ಷ ಕಿ.ಲೋ ಮೀಟರ್. ಈಗ ನೌಕೆಯು ಚಂದ್ರನಿಗೆ ಇನ್ನಷ್ಟು ಸಮೀಪ ತಲುಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರನ ಕಕ್ಷೆಗೆ ಸಮೀಪಿಸಿದ ಬಳಿಕ ನೌಕೆಯ ದ್ರವ್ಯ ಎಂಜಿನ್‍ಅನ್ನು ಮತ್ತೆ ಉರಿಸಲಾಗುತ್ತದೆ. ಇದರಿಂದ ನೌಕೆ ಚಂದ್ರನ ಕಕ್ಷೆಯೊಳಗೆ ಸೇರಿಕೊಳ್ಳುತ್ತದೆ. ಇದರ ನಂತರ ಆಗಸ್ಟ್ 21, 28, 30 ಮತ್ತು ಸೆ. 1ರಂದು ನಾಲ್ಕು ಕಕ್ಷಾ ಕೌಶಲ ಕಾರ್ಯವನ್ನು ನಡೆಸಲಾಗುತ್ತದೆ. ಚಂದ್ರನ ಮೇಲ್ಮೈನ ಸುಮಾರು 100 ಕಿ.ಮೀ. ದೂರದಲ್ಲಿರುವ ಚಂದ್ರನ ಧ್ರುವದತ್ತ ಸಾಗಿ ಕೊನೆಯ ಕಕ್ಷೆ ಸೇರಿಕೊಳ್ಳುವಂತೆ ಮಾಡಲಾಗುತ್ತದೆ. ಸೆ. 2ರಂದು ವಿಕ್ರಮ್ ಲ್ಯಾಂಡರ್ ಆರ್ಬಿಟರ್ ನಿಂದ ಬೇರ್ಪಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು