Recent Posts

Monday, January 20, 2025
ಸುದ್ದಿ

ಹಿಂದೂ ಧರ್ಮೀಯರ ನಂಬಿಕೆ ನೋಡಲು ನ್ಯಾಯಾಲಯ ಎಲ್ಲೆ ಮೀರಿ ಹೋಗಬಾರದು – ಕಹಳೆ ನ್ಯೂಸ್

ನವದೆಹಲಿ: ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂ ಧರ್ಮೀಯರ ನಂಬಿಕೆ, ಅದರ ವೈಚಾರಿಕತೆ ನೋಡಲು ನ್ಯಾಯಾಲಯವು ಎಲ್ಲೆ ಮೀರಿ ಹೋಗಬಾರದು ಎಂದು ರಾಮ ಲಲ್ಲಾ ವಿರಾಜ್ ಮಾನ್ ಪರ ವಕೀಲ ಸುಪ್ರೀಂ ಕೋರ್ಟ್ ಮುಂದೆ ಬುಧವಾರ ವಾದ ಮಂಡಿಸಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲಿ ಸತತ ಆರು ದಿನಗಳಿಂದ ರಾಜಕೀಯ ಸೂಕ್ಷ್ಮ ಪ್ರಕರಣವಾದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ರಾಮ್ ಲಲ್ಲಾ ವಿರಾಜ್ ಮಾನ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮ ದೇವರ ಜನ್ಮಸ್ಥಳ ಅಯೋಧ್ಯೆ ಎಂದು ಹೇಳುವುದು ಹಿಂದೂಗಳ ನಂಬಿಕೆ, ಇದು ಎಷ್ಟು ತರ್ಕಬದ್ಧ ಎಂದು ನೋಡಲು ನ್ಯಾಯಾಲಯ ಹೋಗಬಾರದು ಎಂದು ಹಿರಿಯ ನ್ಯಾಯವಾದಿ ವೈದ್ಯನಾಥ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ 14 ಮನವಿಗಳು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿದ್ದವು. ಅಯೋಧ್ಯೆಯ 2.77 ಎಕರೆ ಜಮೀನನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೊಹಿ ಅಖಾರಾ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.