Monday, November 25, 2024
ಸುದ್ದಿ

ಪಾಕ್ ಸ್ವಾತಂತ್ರೋತ್ಸವ: ವಾಘಾ ಗಡಿಯಲ್ಲಿ ಸೇನೆಗಳ ನಡುವೆ ಸಿಹಿ ವಿನಿಮಯ ರದ್ದು – ಕಹಳೆ ನ್ಯೂಸ್

ಅಟ್ಟಾರಿ: ಪಾಕಿಸ್ತಾನದ ಸ್ವಾತಂತ್ರೋತ್ಸವ ದಿನವಾದ ಇಂದು (ಆ.14) ವಾಘಾ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಮತ್ತು ಪಾಕ್ ರೇಂಜರ್ ಗಳ ನಡುವೆ ಸಂಪ್ರದಾಯದಂತೆ ನಡೆಯಬೇಕಿದ್ದ ಸಿಹಿ ವಿನಿಮಯ ಕಾರ್ಯಕ್ರಮಕ್ಕೆ ತಡೆ ಬಿದ್ದಿದೆ.

ಹಲವು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದ್ದ ಸಿಹಿ ಹಂಚಿಕೊಳ್ಳುವ ಸಂಪ್ರದಾಯ ಬಕ್ರೀದ್ ದಿನವೇ ಮುರಿದುಬಿದ್ದಿತ್ತು. ಪಾಕಿಸ್ತಾನದ ರೇಂಜರ್ ಗಳು ಈದ್ ದಿನ ಬಿಎಸ್‍ಎಫ್‍ನಿಂದ ಸಿಹಿ ಸ್ವೀಕರಿಸಲು ನಿರಾಕರಿಸಿದ್ದರು.
ಮೂಲಗಳ ಮಾಹಿತಿ ಪ್ರಕಾರ, ಈದ್ ಪ್ರಯುಕ್ತ ಬಿಎಸ್‍ಎಫ್ ಪಾಕಿಸ್ತಾನದ ಸೇನೆಯೊಂದಿಗೆ ಸಿಹಿ ಹಂಚಿಕೊಳ್ಳಲು ಇಚ್ಛಿಸಿತ್ತು. ಆದರೆ, ಪಾಕಿಸ್ತಾನದ ರೇಂಜರ್ ಗಳು ನಿರಾಕರಿಸಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಈದ್ ಪ್ರಯುಕ್ತ ಭಾರತದ ಕಡೆಯಿಂದ ಸಿಹಿ ಸ್ವೀಕರಿಸುವುದಿಲ್ಲ,’ ಎಂದು ಪಾಕಿಸ್ತಾನದ ರೇಂಜರ್ ಗಳು ಭಾನುವಾರವೇ ಬಿಎಸ್‍ಎಫ್‍ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ ತಿಳಿಸಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ದಿನಗಳಂದು ಎರಡೂ ರಾಷ್ಟ್ರಗಳು ಗಡಿಯಲ್ಲಿ ಸಿಹಿ ಹಂಚಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಸದ್ಯ ಎರಡೂ ರಾಷ್ಟ್ರಗಳ ನಡುವೆ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕ್ಷುಬ್ಧತೆ ಮನೆ ಮಾಡಿದೆ. ಇದೇ ಕಾರಣಕ್ಕೆ ಗಡಿಯಲ್ಲಿನ ಇಂಥ ಸತ್ಸಂಪ್ರದಾಯಗಳಿಗೂ ತಡೆ ಬಿದ್ದಿದೆ.