Monday, January 20, 2025
ಸುದ್ದಿ

ರಾಜ್ಯದ 39 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ – ಕಹಳೆ ನ್ಯೂಸ್

ಬೆಂಗಳೂರು – ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 39 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾತ್ರರಾಗಿದ್ದಾರೆ. ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ಬಸಪ್ಪ. ಎಸ್ ಅಂಗಡಿ ಅವರಿಗೆ ದೊರೆತಿದೆ.

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ 38 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ. ಎ.ಸಿ.ಪಿ.ಗಳಾದ ಬೆಂಗಳೂರಿನ ಚಿಕ್ಕಪೇಟೆ ಉಪವಿಭಾಗದ ಎನ್.ಆರ್.ಮಹಂತಾರೆಡ್ಡಿ, ಹಲಸೂರು ಉಪವಿಭಾಗದ ಟಿ.ಮಂಜುನಾಥ್, ಮಂಗಳೂರು ದಕ್ಷಿಣ ಉಪವಿಭಾಗದ ರಾಮರಾವ್ ಕೊತ್ವಾಲ್, ಧಾರವಾಡ ಉಪವಿಭಾಗದ ಎಂ.ಎನ್.ರುದ್ರಪ್ಪ, ಡಿವೈಎಸ್ಪಿಗಳಾದ ಸಿಐಡಿಯ ಕೆ.ರವಿಶಂಕರ್, ಮಾಗಡಿ ಉಪವಿಭಾಗದ ಬಿ.ಆರ್.ವೇಣು ಗೋಪಾಲ್, ಚಿಕ್ಕಮಗಳೂರು ಜಿಲ್ಲೆ ಡಿಸಿ.ಆರ್.ಬಿ.ಯ ಕೆ.ಸಿ.ಲಕ್ಷ್ಮೀನಾರಾಯಣ, ಬೆಂಗಳೂರು ಎ.ಸಿ.ಬಿ. ಎಂ.ಕೆ.ತಮ್ಮಯ್ಯ, ಲಿಂಗಸೂರು ಉಪವಿಭಾಗದ ಎಸ್.ಎಚ್.ಸುಬೇದಾರ್, ಐಜಿಪಿ ಕೇಂದ್ರ ವಲಯ ಕಚೇರಿಯ ಡಾ.ಪ್ರಕಾಶ್, ಮಡಿಕೇರಿ ಉಪವಿಭಾಗದ ಕೆ.ಸುಂದರ್‍ರಾಜ್, ದಾವಣಗೆರೆ ಸಶಸ್ತ್ರ ಮೀಸಲು ಪಡೆಯ ತಿಪ್ಪೇಸ್ವಾಮಿ ಅವರಿಗೆ ರಾಷ್ಟ್ರಪತಿಗಳ ಪದಕ ದೊರೆತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್‍ಸ್ಪೆಕ್ಟರ್ ಗಳಾದ ಬೆಂಗಳೂರಿನ ಚಂದ್ರಾಲೇಔಟ್‍ನ ಕಲ್ಲಪ್ಪ.ಎಸ್ ಕಾರಟ್, ಕಾಟನ್‍ಪೇಟೆಯ ಕುಮಾರಸ್ವಾಮಿ.ಬಿ.ಜಿ, ಅಶೋಕನಗರದ ಎಸ್.ಬಿ.ಶಶಿಧರ್, ಕಬ್ಬನ್‍ಪಾರ್ಕ್‍ನ ಅಯ್ಯಣ್ಣ ರೆಡ್ಡಿ, ಹೆಣ್ಣೂರು ಠಾಣೆಯ ಎಚ್.ಡಿ.ಕುಲಕರ್ಣಿ, ಸಿ.ಐ.ಡಿ.ಯ ಗೀತಾ.ಡಿ ಕುಲಕರ್ಣಿ, ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ದಳದಲ್ಲಿರುವ ಬಿ.ಎಸ್.ಬಸವರಾಜ್, ತುಮಕೂರು ಜಿಲ್ಲೆ ಬೆಸ್ಕಾಂ ಜಾಗೃತದಳದ.ಎಂ.ವಿ.ಶೇಷಾದ್ರಿ, ಬಳ್ಳಾರಿ ಗ್ರಾಮಾಂತರ ಠಾಣೆಯ ಬಿ.ಎಸ್.ಸುಧಾಕರ್, ಗೌರಿಬಿದನೂರು ಠಾಣೆಯ ವೈ.ಅಮರನಾರಾಯಣ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರೆತಿದೆ.
ಕೆಎಸ್‍ಆರ್‍ಪಿಯ 3ನೇ ಬೆಟಾಲಿಯನ್‍ನ ಎ.ಆರ್.ಎಸ್.ಐ ರಾಜುಗೋಪಾಲ್.ಆರ್, ಚಿಕ್ಕಮಗಳೂರು ಸಶಸ್ತ್ರ ಮೀಸಲು ಪಡೆಯ ಎ.ಆರ್.ಎಸ್.ಐ ಬಿ.ಎಸ್.ಸುದೇಶ್ ಕಿಣಿ, ತುಮಕೂರು ನಗರದ ಎ.ಎಸ್.ಐ ಆರ್.ಎಸ್.ಸಿದ್ದಪ್ಪ, ಹಾವೇರಿಯ ಎಸ್ಪಿ ಕಚೇರಿಯ ಎನ್.ಆರ್.ಕಾಟೆ, ಶಿವಮೊಗ್ಗ ಜಿಲ್ಲೆಯ ಬೆರಳಚ್ಚು ವಿಭಾಗದ ಸತೀಶ್.ಆರ್.
ಇನ್ನು ಹೆಡ್‍ಕಾನ್‍ಸ್ಟೇಬಲ್‍ಗಳ ಪೈಕಿ ಬೆಂಗಳೂರಿನ ಕ್ರೈಂ ಸ್ಪೆಷಲ್ ಬ್ರಾಂಚ್‍ನ ರುದ್ರಸ್ವಾಮಿ, ಇಂಟಲಿಜೆನ್ಸಿಯ ರವೀಂದ್ರ.ಎಚ್.ಸಿ, ಮೈಸೂರು ಎಸಿಬಿಯ ಮಂಜುನಾಥ್ ರಾವ್, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್‍ನ ಅಶೋಕ್.ಎಸ್. ನಾಯಕ್, 5ನೇ ಬೆಟಾಲಿಯನ್‍ನ ರಮೇಶ್, 4ನೇ ಬೆಟಾಲಿಯನ್ ವಿಜಯಕುಮಾರ್.ಪಿ.ವಿ, ಚಿಕ್ಕಮಗಳೂರು ಜಿಲ್ಲೆ ಅಲ್ದೂರು ಠಾಣೆಯ ರಂಗನಾಥನ್, ದಾವಣಗೆರೆ ಜಿಲ್ಲೆಯ ರಾಮಚಂದ್ರ, ಕೊಡಗು ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ಸುಮತಿ.ಎಂ, ಮಂಗಳೂರು ಸಿಟಿ ಕ್ರೈಂ ಬ್ರಾಂಚ್‍ನ ಕೊಪ್ಪಳ ಚಂದ್ರ, ಗದಗದ ಡಿಸಿ.ಆರ್.ಬಿ.ಯ ಡಿ.ಎಂ.ಮಾಯ್ಗೇರಿ ಅವರಿಗೆ ಶ್ಲಾಘನೀಯ ಸೇವಾ ಪದಕ ದೊರೆತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು