Monday, January 20, 2025
ಸುದ್ದಿ

ವ್ಯಂಗ್ಯಕ್ಕೆ ಒಳಗಾದ ರಮನಾಥ ರೈಯವರಿಂದ ಜನರಿಗೆ ಮಾತಿನ ತಿರುಗೇಟು- ಕಹಳೆ ನ್ಯೂಸ್

ಕೆಲ ದಿನಗಳ ಹಿಂದೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಬಂಟ್ವಾಳದ ಕೆಲ ಪ್ರದೇಶವು ಜಲಾವೃತವಾಗಿತ್ತು. ಈ ಸಂಧರ್ಭದಲ್ಲ್ಲಿ ಮಾಜಿ ಸಚಿವ ರಮನಾಥ ರೈ ಪ್ರವಾಹ ವೀಕ್ಷಣೆಗೆಂದು ದೋಣಿಯಲ್ಲಿ ಕುಳಿತು ಪ್ರವಾಹ ವೀಕ್ಷಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಲಾರಂಭಿಸಿತು ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಗಣಪತಿಯ ವಿಸರ್ಜನೆ ಎಂದು ವ್ಯಂಗ್ಯ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯಕ್ಕೆ ಸಂಬಂಧಿಸಿ ಮಾಜಿ ಸಚಿವ ರಮನಾಥ ರೈ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಗಣಪತಿ ಎಂದು ಕೆಲವರು ಕರೆದಿದ್ದಾರೆ, ಗಣಪತಿ ನನ್ನ ಮೆಚ್ಚಿನ ದೇವರು, ದೇವರ ಹೆಸರನ್ನು ನಂಗೆ ಇಟ್ಟವರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಅದೇ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.