Monday, January 20, 2025
ಸಿನಿಮಾ

ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಮದುವೆ ಫಿಕ್ಸ್, ಹುಡುಗ ಯಾರು ಗೊತ್ತಾ..? – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟಿ ರಮ್ಯ ವಿವಾಹದ ಬಗ್ಗೆ ಈ ಹಿಂದೆ ಅನೇಕ ವಿಷಯಗಳು ಪ್ರಸ್ತಾಪವಾಗಿದ್ದು, ಮಾಜಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್‍ಗಾಂಧಿಯನ್ನು ವಿವಾಹವಾಗುವುದಾಗಿ ಎಲ್ಲೆಡೆ ಸುದ್ದಿ ಹರಿದಾಡಿತ್ತು. ಆದರೆ ಇದೀಗ ರಮ್ಯಾ ವಿವಾಹದ ಬಗ್ಗೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ. ಊರೆಲ್ಲ ಸುತ್ತಿ ಬಂದವಳಿಗೆ ಹಳೇ ಗಂಡನ ಪಾದವೇ ಗತಿ ಅನ್ನುವ ಹಾಗಾಯ್ತು ನಮ್ಮ ಜಂಭದ ಕೋಳಿ ರಮ್ಯನ ಕಥೆ.

ಅದೇ ಹಳೇ ಲವ್ವರ್ ಜೊತೆ ರಮ್ಯಾ ವಿವಾಹ ನಿಶ್ಚಯವಾಗಿದೆ. ಈ ಹಿಂದೆ ಎಲ್ಲಿ ಹೋದರಲ್ಲಿ ರಮ್ಯ ಜೊತೆ ಕಾಣಿಸಿಕೊಳ್ಳುತಿದ್ದ ಪೋರ್ಚುಗಲ್ ಗೆಳೆಯ ರಾಫೆಲ್ ಜೊತೆಯೇ ರಮ್ಯಾ ವಿವಾಹ ನಿಶ್ಚಯ ಆಗಿದೆ. ರಾಜಕೀಯದಲ್ಲಿ ತೊಡಗಿಸಿಕೊಂಡ ಮೇಲೆ ತಮ್ಮ ಹಳೇ ಗೆಳೆಯನನ್ನು ಬಿಟ್ಟಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಹುಲ್ ಗಾಂಧಿ ಜೊತೆ ಮದುವೆ ಅಂತ ದೇಶದಾದ್ಯಂತ ಸುದ್ದಿ ಹರಡಿತ್ತು. ರಮ್ಯ ರಾಜ್ಯ ಬಿಟ್ಟು ದೆಹಲಿ ರಾಜಕಾರಣದತ್ತ ಹೋಗಿದ್ರು. ಅಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ರು. ಆದ್ರೆ ಇತ್ತಿಚೆಗೆ ಯಾಕೋ ರಾಜಕೀಯದಿಂದಲೂ ದೂರ ಉಳಿದಿದ್ರು. ಕರ್ನಾಟಕದತ್ತ ಮುಖನೇ ಮಾಡಲಿಲ್ಲ. ಎಲ್ಲೂ ಸುದ್ದಿಯಲ್ಲೂ ಇರಲಿಲ್ಲ. ಇದೀಗ ಇದ್ದಕ್ಕಿದ್ದ ಹಾಗೇ ಹಳೇ ಬಾಯ್ ಪ್ರೆಂಡ್‍ನ್ನು ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಬಂದಿದೆ. ಆದಷ್ಟು ಬೇಗ ಮದುವೆಯಾಗಿ ಸುಖ ಸಂಸಾರ ನಡೆಸಲಿ.

ಜಾಹೀರಾತು
ಜಾಹೀರಾತು
ಜಾಹೀರಾತು