Monday, January 20, 2025
ಸುದ್ದಿ

ವೀರಯೋಧ ಶಿವಪ್ರಸಾದ್ ಪಾಲಡ್ಕರಿಂದ ಧ್ವಜಾರೋಹಣ – ಕಹಳೆ ನ್ಯೂಸ್

ಸುಳ್ಯ: ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್‍ನ ಧ್ವಜಾರೋಹಣವನ್ನು ವೀರಯೋಧ ಶಿವಪ್ರಸಾದ್ ಪಾಲಡ್ಕ ಇವರು ನೆರವೇರಿಸಿದರು. ಇವರು ಸುಮಾರು 16 ವರ್ಷದಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತೀಲ, ಮಾಜಿ ಅಧ್ಯಕ್ಷರಾದ ಹರೀಶ್ ಉಬರಡ್ಕ, ಉಪಾಧ್ಯಕ್ಷರಾದ ಶೈಲಜಾ ಶಂಕರ್, ಸದಸ್ಯರಾದ ಶಶಿಧರ ಕಂಬಳಿಮೂಲೆ, ದೇವಕಿ ಕುದ್ಪಾಜೆ, ಸುಶೀಲ ಮೂರ್ಜೆ, ಗೀತ ಕುತ್ತಮೊಟ್ಟೆ, ಮೋಹನಾಂಗಿ ಯಾವಟೆ, ಪಂಚಾಯತ್ ಕಾರ್ಯದರ್ಶಿ ವಿದ್ಯಾಧರ ಕೆ ಎನ್ ಮತ್ತು ಸಿಬ್ಬಂದಿಗಳು, ನರಸಿಂಹ ಶಾಸ್ತಾವು ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾದ ಗಂಗಾಧರ ಕೆ, ಉಬರಡ್ಕ ಅಂಗವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ, ಗ್ರಂಥಾಲಯ ಮೇಲ್ವಿಚಾರಕಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಪಂಚಾಯತ್ ವತಿಯಿಂದ ಯೋಧ ಶಿವಪ್ರಸಾದ್ ಮತ್ತು ಅವರ ಧರ್ಮಪತ್ನಿಯಾದ ಚಂದ್ರಾವತಿ ಮಕ್ಕಳಾದ ಪ್ರಜತ್ ಮತ್ತು ಗ್ರಹಿತ್ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾಧರ ಕೆ ಎನ್ ಸ್ವಾಗತಿಸಿ, ಜನಾರ್ಧನ ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು