Recent Posts

Monday, January 20, 2025
ಕ್ರೀಡೆ

ಕೊಹ್ಲಿ ಶತಕ, ಅಯ್ಯರ್ ಆಕರ್ಷಕ ಅರ್ಧಶತಕದೊಂದಿಗೆ ಭಾರತಕ್ಕೆ ಜಯ – ಕಹಳೆ ನ್ಯೂಸ್

ಪೋರ್ಟ್ ಆಫ್ ಸ್ಪೇನ್ : ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ (114 ) ಹಾಗೂ ಯುವ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ 65 ರನ್‍ಗಳ ನೆರವಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್‍ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಸರಣಿಯನ್ನು ವಶ ಪಡಿಸಿಕೊಂಡಿತು. ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರೀಸ್ ಮಳೆಯಿಂದಾಗಿ 35 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತ್ತು. ಆರಂಭಿಕ ಆಟಗಾರರಾದ ಕ್ರೀಸ್ ಗೇಲ್ ಹಾಗೂ ಎವಿನ್ ಲೂವಿಸ್ ಬಿರುಸಿನ ಆರಂಭ ಒದಗಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಳೆ ಕಾಡಿದರೂ ಹೆಚ್ಚಿನ ತೊಂದರೆ ಉಂಟಾಗಲಿಲ್ಲ. ಬಳಿಕ ಪಂದ್ಯ ಮುಂದುವರೆಸಿದಾಗ ಕ್ರೀಸ್ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಪರಿಣಾಮ 6.1 ಓವರ್ ಗಳಲ್ಲಿಯೇ ತಂಡದ ಮೊತ್ತ 50 ಹಾಗೂ 9. 1 ಓವರ್ ಗಳಲ್ಲಿಯೇ 100ರ ಗಡಿ ದಾಟಿತು.

ಈ ಮೂಲಕ ಟೀಂ ಇಂಡಿಯಾ 32.3 ಓವರ್ ಗಳಲ್ಲೇ ಗುರಿ ತಲುಪಿತು. 99 ಎಸೆತಗಳನ್ನು ಎದುರಿಸಿದ ಕೊಹ್ಲಿ 14 ಬೌಂಡರಿಗಳ ನೆರವಿನಿಂದ 114 ರನ್ ಗಳಿಸಿ ಅಜೇಯರಾಗುಳಿದರು. ಡೆಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್ ಅಂತರದಲ್ಲಿ ಗೆಲುವು ದಾಖಲಿಸಿತು.