Monday, January 20, 2025
ಸುದ್ದಿ

ಮೂರು ಸೇನೆಗಳ ಸಮನ್ವಯತೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ(ಸಿಡಿಎಸ್) ನೇಮಕ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ಹೊಸದಿಲ್ಲಿ: ದೇಶದಲ್ಲಿ ಮೂರು ಸೈನ್ಯಗಳ ಸಮನ್ವಯತೆ ಸಾಧಿಸುವ ಉದ್ದೇಶಕ್ಕಾಗಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ(ಸಿಡಿಎಸ್) ನೇಮಕ ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.
ದಿಲ್ಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು(ಸಿಡಿಎಸ್) ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಗಳಿಗೆ ನಾಯಕರಾಗಿರುತ್ತಾರೆ. ಇವರ ನಾಯಕತ್ವದಲ್ಲಿ ಮೂರು ಸೇನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಸಿಡಿಎಸ್ ನೇಮಕದಿಂದ ಭದ್ರತಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ಸಾಧ್ಯವಾಗುತ್ತದೆ. ಅವರು ಮೂರು ಸೇನೆಗಳಿಗೂ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ. 1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ದೇಶದ ರಕ್ಷಣಾ ವ್ಯವಸ್ಥೆಯಲ್ಲಿನ ಅಂತರವನ್ನು ಪರೀಕ್ಷಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ರಕ್ಷಣಾ ಸಚಿವರಿಗೆ ಸೈನ್ಯದ ಸಲಹೆಗಾರರಾಗಿ ಸಿಡಿಎಸ್ ನೇಮಕ ಬಗ್ಗೆ ಸಲಹೆ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

2012ರಲ್ಲಿ ನರೇಶ್ ಚಂದ್ರ ಕಾರ್ಯಪಡೆ ಸಮಿತಿಯು ಸಿಒಎಸ್‍ಸಿ ಗೆ ಶಾಶ್ವತ ಅಧ್ಯಕ್ಷ ಹುದ್ದೆಯ ಸೃಷ್ಟಿಗೆ ಶಿಫಾರಸು ಮಾಡಿತ್ತು ಎಂದು ಪ್ರಧಾನಿ ಮೋದಿ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು