Sunday, January 19, 2025
ಸುದ್ದಿ

ಹನಿ ಟ್ರ್ಯಾಪ್ 3 ಮಹಿಳೆಯರು ಸೇರಿ ಐವರ ಬಂಧನ | ಜಿಹಾದ್ ಶಂಕೆ – ಕಹಳೆ ನ್ಯೂಸ್

 

ಬೆಂಗಳೂರು : ಶ್ರೀಮಂತರನ್ನು ವೇಶ್ಯಾವಾಟಿಕೆ ನೆಪದಲ್ಲಿ ಮನೆಗೆ ಕರೆಸಿಕೊಂಡು ಕೂಡಿಹಾಕಿ ಹಲ್ಲೆ ನಡೆಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ಹನಿ ಟ್ರ್ಯಾಪ್ ದಂಧೆಯನ್ನು ಕೊತ್ತನೂರು ಪೊಲೀಸರು ಬೇಧಿಸಿ, ಮೂವರು ಮಹಿಳೆಯರು ಸೇರಿದಂತೆ, ಐವರನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಗಡೆ ನಗರದ ಶಾಯಿನ್ (40), ನೂರಿ ಅಲಿಯಾಸ್ ಶಮಾ (35), ಸಲ್ಮಾನ್ ಪರ್ವೀನ್ (27), ಕೆ.ಜಿ. ಹಳ್ಳಿಯ ಸಜ್ಜಿದ್ ಶೇಖ್ (38) ಹಾಗೂ ಶಬ್ಬೀರ್ ಶರೀಫ್ (30) ಬಂಧಿತ
ಆರೋಪಿಗಳಾಗಿದ್ದಾರೆ.ಬಂಧಿತರಿಂದ 5 ಸಾವಿರ ರೂ. ನಗದು, 5 ಮೊಬೈಲ್‌ಗಳು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಶಿವಾಜಿನಗರದ ಸಲೀಂ ಹಾಗೂ ಮೆಂಟಲ್ ಆಸೀಫ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ, ಇ ಪ್ರಕರಣದ ಹಿಂದೆ ದೊಡ್ಡ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಮತ್ತು ಜಿಹಾದ್ ಶಂಕೆ ಇದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಲೆಮರೆಸಿಕೊಂಡಿರುವ ಸಲೀಂ ಹಾಗೂ ಮೆಂಟಲ್ ಆಸೀಫ್ ಹೆಗಡೆ ನಗರದ ಆರೋಪಿ ಶಾಯಿನ್ ಅವರ ಮನೆಯಲ್ಲಿ ಹನಿ ಟ್ರ್ಯಾಪ್ ದಂಧೆ ನಡೆಸುತ್ತಿದ್ದರು.ಶಾಯಿನ್ ಹಾಗೂ ನೂರಿ, ಶ್ರೀಮಂತ ಗಿರಾಕಿಗಳಿಗೆ ನಮ್ಮ ಮನೆಯಲ್ಲಿ ಸುಂದರವಾದ ಯುವತಿ ಇದ್ದಾಳೆ ಎಂದು ತಿಳಿಸಿ ಮನೆಗೆ ಕರೆಸಿಕೊಳ್ಳುತ್ತಿದ್ದರು.

ಗಿರಾಕಿಗಳು ಬಂದ ನಂತರ ಅವರಿಗೆ ಯುವತಿಯೊಬ್ಬಳನ್ನು ತೋರಿಸಿ ರೂಂ ಒಂದಕ್ಕೆ ಕಳುಹಿಸುತ್ತಿದ್ದು, 10 ನಿಮಿಷದೊಳಗೆ ಅವರುಗಳು ಬಟ್ಟೆಬಿಚ್ಚಿ ನಗ್ನರಾಗುತ್ತಿದ್ದಂತೆ, ಏಕಾಏಕಿ ರೂಂಗೆ ನುಗ್ಗಿ ನಗ್ನವಾಗಿದ್ದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರು.

ವಿಡಿಯೋ ಇಟ್ಟುಕೊಂಡು ಗಿರಾಕಿಗೆ ನಿನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಜೈಲಿಗೆ ಕಳುಹಿಸುತ್ತೇವೆ. ಅಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ಕಳೆದು ಮನೆಯವರನ್ನು ಕರೆಸಿ ತೋರಿಸುತ್ತೇವೆ ಎಂದು ಬೆದರಿಸಿ, ಹಲ್ಲೆ ನಡೆಸಿ, ರಾತ್ರಿವರೆಗೂ ಕೂಡಿ ಹಾಕಿ ಲಕ್ಷಾಂತರ ರೂ. ಗಳ ಬೇಡಿಕೆ ಇಟ್ಟು, ಎಷ್ಟು ಸಾಧ್ಯವೋ ಅಷ್ಟನ್ನು ಸುಲಿಗೆ ಮಾಡಿ ಕಳುಹಿಸುತ್ತಿದ್ದು, ಇದಕ್ಕೆ ಇನ್ನಿಬ್ಬರು ಆರೋಪಿಗಳು ಸಾಥ್ ನೀಡುತ್ತಿದ್ದರು.

ಕಳೆದ ಜನವರಿ 15 ರಂದು ಆರೋಪಿಗಳಾದ ಶಾಯಿನ್ ಹಾಗೂ ನೂರಿ, ಡಿ.ಜೆ. ಹಳ್ಳಿಯ ಸಯ್ಯದ್ ರಹಮತ್ ಎಂಬುವವರಿಗೆ ಕರೆ ಮಾಡಿ ನಮ್ಮಲ್ಲಿ ಸುಂದರವಾದ ಯುವತಿ ಇದ್ದಾಳೆ ಎಂದು ಮನೆಗೆ ಕರೆಸಿಕೊಂಡು ಯುವತಿಯೊಬ್ಬಳನ್ನು ತೋರಿಸಿ ರೂಮ್‌ಗೆ ಕಳುಹಿಸಿದ್ದರು.

ಕೆಲವೇ ನಿಮಿಷಗಳಲ್ಲಿ ರೂಮ್‌ಗೆ ನುಗ್ಗಿ ನಗ್ನರಾಗಿದ್ದ ರಹಮತ್ ಅವರ ವಿಡಿಯೋ ಚಿತ್ರೀಕರಿಸಿ ನೀನು, ನನ್ನ ಪತ್ನಿಯ ಜೊತೆ ಮಲಗಿದ್ದೀಯಾ, ನಿನ್ನ ಮೇಲೆ ದೂರು ನೀಡುತ್ತೇವೆ. ಪತ್ನಿ, ಮಕ್ಕಳನ್ನು ಕರೆಸಿ ವಿಡಿಯೋ ತೋರಿಸುತ್ತೇವೆ ಎಂದು ಆರೋಪಿ ಮೆಂಟಲ್ ಆಸೀಫ್ ಬೆದರಿಸಿ ಹಲ್ಲೆ ನಡೆಸಿದ್ದಾನೆ. ಮನೆಯಿಂದ ಹೊರಹೋಗಲು ಬಿಡದೆ ಕೂಡಿಹಾಕಿ 50 ಸಾವಿರಗಳಿಗೆ ಬೇಡಿಕೆ ಇಟ್ಟು ಅವರ ಬಳಿಯಿದ್ದ 5 ಸಾವಿರ ರೂ.ಗಳನ್ನು ಸುಲಿಗೆ ಮಾಡಿ ಸಂಜೆಯೊಳಗೆ ಉಳಿದ ಹಣವನ್ನು ನೀಡುವಂತೆ ಕಾಲಾವಕಾಶ ಕೊಟ್ಟು ಕಳುಹಿಸಿದ್ದರು.

ಅದಕ್ಕೆ ಒಪ್ಪಿಕೊಂಡು ಬಂದ ರಹಮತ್ ಅವರು ನೀಡಿದ ದೂರು ದಾಖಲಿಸಿದ ಕೊತ್ತನೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ.ಆರೋಪಿಗಳು ಹಲವು ಮಂದಿಯನ್ನು ಇದೇ ರೀತಿ ಬೆದರಿಸಿ ಸುಲಿಗೆ ಮಾಡಿರುವ ಮಾಹಿತಿ ಇದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಗಿರೀಶ್ ತಿಳಿಸಿದ್ದಾರೆ.

ಸಿಸಿಬಿ ಕಾರ್ಯಾಚರಣೆ
ವಿಜಯನಗರದ ಆರ್.ಪಿ.ಸಿ. ಲೇಔಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ವಿಜಯನಗರದ ಪುಷ್ಪ ಬಂಧಿತ ಆರೋಪಿಯಾಗಿದ್ದು, ಈಕೆ ನಡೆಸುತ್ತಿದ್ದ ದಂಧೆಯಲ್ಲಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿ, ಮೊಬೈಲ್, 2 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಉದ್ಯೋಗದ ನೆಪದಲ್ಲಿ ಯುವತಿಯರನ್ನು ಕರೆತಂದು ದಂಧೆ ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ : ಕಹಳೆ ನ್ಯೂಸ್

Leave a Response