Recent Posts

Sunday, January 19, 2025
ಸುದ್ದಿ

ಮುಬಾರಕ್ ಜುಮಾ ಮಸೀದಿ ಕುದ್ಲೂರುನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ – ಕಹಳೆ ನ್ಯೂಸ್

ಕುದ್ಲೂರು: ಮುಬಾರಕ್ ಜುಮಾ ಮಸೀದಿ ಕುದ್ಲೂರಿನ ಸ್ಥಳೀಯ ಮಸೀದಿ ವಠಾರದಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಅಶ್ರಫ್ ರಹ್ಮಾನಿಯ ಆರ್ಶಿವಾದದೊಂದಿಗೆ ನಾಂದಿಯಾದ ಸಮಾಗಮದಲ್ಲಿ ಹುತಾತ್ಮರನ್ನು ಸ್ಮರಿಸುತ್ತಾ ಭಾಷಣ ಮಾಡಿದರು. ಮದರಸಾ ಮಕ್ಕಳು ದೇಶಭಕ್ತಿಗೀತೆಯನ್ನು ಆಲಾಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮದರಸಾ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ವೈ, ಕೋಶಾಧಿಕಾರಿ ಅಬ್ದುಲ್ ಖಾದರ್ ಬಿ.ಕೆ, ಉಪಾಧ್ಯಕ್ಷ ಸುಲೈಮಾನ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ಕೊರೆಪದವು, ಕಾರ್ಯದರ್ಶಿ ಇಸ್ಮಾಯಿಲ್ ಕೆ.ವೈ, ಕೋಶಾಧಿಕಾರಿ ನಝೀರ್ ಮುಸ್ಲಿಯಾರ್ ಎಸ್.ಕೆ.ಎಸ್.ಬಿ.ವಿ ಪಧಾಧಿಕಾರಿಗಳು ಸಹಿತ ಊರ ಗಣ್ಯ ವ್ಯಕ್ತಿಗಳು, ಉಲಮಾ ನೇತಾರರು ಹಾಗೂ ಮದರಸಾ ವಿದ್ಯಾರ್ಥಿಗಳು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು