Monday, January 20, 2025
ಸುದ್ದಿ

ಕಡಬಾದ ಸರಸ್ವತೀ ವಿದ್ಯಾಲಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾಬಂಧನ ಆಚರಣೆ – ಕಹಳೆ ನ್ಯೂಸ್

ಕಡಬ: ಹಿರಿಯರ ಕಲ್ಪನೆಯಂತೆ, ಹಿರಿಯರ ಕನಸನ್ನು ನನಸು ಮಾಡುವ ವ್ಯಕ್ತಿ ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಪ್ರತಿಯೊಂದು ಶಾಲೆಯಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆದರೆ ದೇಶ ಸಂಸ್ಕಾರಯುತ ದೇಶವಾಗಲು ಸಾಧ್ಯವೆಂದು ಸರಸ್ವತೀ ವಿದ್ಯಾಲಯದಲ್ಲಿ ಧ್ವಜಾರೋಹಣ ಮಾಡಿದ ಯಶೋಧರ ಬಲ್ಲಾಳ್ ಯಾನೆ ತಮ್ಮಯ್ಯ ಇವರು ದೇಶದ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ, ಶಿಕ್ಷಣ ಮಟ್ಟ ಹೆಚ್ಚುತ್ತಾ ಹೋದ ಹಾಗೆ ಅನಾಥ ಆಶ್ರಮ ಹೆಚ್ಚುತ್ತಾ ಹೋಗುತ್ತದೆ ಮತ್ತು ಇಂದು ಸಮಾಜದಲ್ಲಿ ಅವಿಭಕ್ತ ಕುಟುಂಬ ನಾಶವಾಗುತ್ತಿದೆ. ಒಗ್ಗಟ್ಟಿನಲ್ಲಿ ಇದ್ದರೆ, ಮಾತ್ರ ನಾವು ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ರಕ್ಷಾಬಂಧನ ಎನ್ನುವುದು ಕೇವಲ ಅಣ್ಣ-ತಂಗಿಗೆ ಸೀಮಿತವಾಗದೇ ಅದು ರಾಷ್ಟ್ರದ ಚಿಂತನೆಯ ಬಗೆಯು ನಮ್ಮಲ್ಲಿ ಆಗಲಿ. ಈ ರಕ್ಷಾಬಂಧನದ ಹಬ್ಬವನ್ನು ಎಲ್ಲರೂ ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡಿ ಎಂದು ಸರಸ್ವತೀ ವಿದ್ಯಾಲಯದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಸಂಸ್ಥೆಯ ನಿರ್ದೇಶಕಿ ಪುಲಸ್ತ್ಯ ರೈ, ಮಾಧವ ಕೆ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಸರ್ವಸದಸ್ಯರು, ವಿದ್ಯಾರ್ಥಿ ವೃಂದ, ಪೋಷಕರು, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿರಿದ್ದರು.
ಸಹಶಿಕ್ಷಕ ನಾಗೇಶ್.ಎ ಸ್ವಾಗತಿಸಿ, ಸಹಶಿಕ್ಷಕ ಗಿರೀಶ್ ಗೌಡ ಸಿ ವಂದಿಸಿ, ಸಹಶಿಕ್ಷಕಿ ಕುಮಾರಿ ಉಷಾ ಕಾರ್ಯಕ್ರಮ ನಿರೂಪಿಸಿದರು.