ಬಂಟ್ವಾಳ: ಬಿಸಿರೋಡಿನ ಮಿನಿವಿಧಾನಸೌಧ ಕಛೇರಿಯಲ್ಲಿ 73ನೆ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ,ಭಾರತ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಸಂವಿಧಾನದ ಚೌಕಟ್ಟಿನಲ್ಲಿ ಮೆರೆಯುತ್ತಿರುವ ಈ ಸಂದರ್ಭದಲ್ಲಿ ನಿಜಕ್ಕೂ ಭಾರತೀಯರಿಗೆ ಹೆಮ್ಮೆಯಾಗುತ್ತಿದೆ. ಅನೇಕ ಹೋರಾಟಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ನೆನಪುಗಳ ಜೊತೆ ಅವರ ಆದರ್ಶದ ನಡೆಯಲ್ಲಿ ನಾವು ಮುಂದೆ ಸಾಗಬೇಕು. ಬಂಟ್ವಾಳ ದ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಬೇಕು, ಪ್ರತಿಯೊಬ್ಬರೂ ಸ್ಚಚ್ಚತೆಗೆ ಹೆಚ್ಚಿನ ಗಮನಕೊಡಿ ಎಂದು ತಿಳಿಸಿದರು.
ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಬೇರೆ ಬೇರೆ ಚಳುವಳಿಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರ ನೆನಪು ಮಾಡಬೇಕಾಗಿದೆ, ನಾವೆಲ್ಲ ಭಾರತ ಮಕ್ಕಳು ಎಂಬ ಭಾವನೆಯಿಂದ ಒಗ್ಗಟ್ಟಿನಲ್ಲಿ ಬದುಕಿದಾಗ ಸದೃಢ ಭಾರತ ನಿರ್ಮಾಣ ವಾಗುತ್ತದೆ ಎಂದರು.
ಮಂಗಳೂರು ಕಾಲೇಹಿನ ಉಪನ್ಯಾಸಕಿ ನಾಗವೇಣಿ ಮಂಚಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಮೌಲ್ಯಯುತವಾದ ಉಚಿತ ಕಡ್ಡಾಯ ಶಿಕ್ಷಣ ಸಿಕ್ಕಾಗ ಅಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ, ಪ್ರಜ್ಞಾವಂತರ ನಾಡು ಆಗುತ್ತದೆ. ನೈತಿಕವಾಗಿ ಜೀವನ ಮೌಲ್ಯ ಗಳನ್ನು ಕಲಿತುಕೊಂಡು ಆತ್ಮ ಶಕ್ತಿಯ ಮೂಲಕ ಬದುಕಲು ಕಲಿಯಬೇಕು ಅಲ್ಲಿ ಸ್ವಾತಂತ್ರ್ಯ, ಪ್ರೀತಿ ವಿಶ್ವಾಸ ಇರಲು ಸಾಧ್ಯ.
ತಾಲೂಕಿನ ಮಿನಿವಿಧಾನ ಸೌಧದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಸ್ವಚ್ಚ ಭಾರತವಾಗಬೇಕಾದರೆ ನಾವು ಸ್ವಚ್ಚ ಬಂಟ್ವಾಳ ಆಭಿಯಾನ ನಡೆಸಬೇಕಾಗಿದೆ. ಬಂಟ್ವಾಳ ಬಂಗಾರದ ಪೇಟೆ ಎಂಬ ಹೆಸರಿಗೆ ತಕ್ಕಂತೆ ಇಲ್ಲಿನ ಜನರು ಚಿನ್ನದಂತಹವರು, ಅದಕ್ಕೆ ಸಾಕ್ಷಿ ನೆರೆಯ ಸಂದರ್ಭದಲ್ಲಿ ಮರೆತು ಒಟ್ಟಾಗಿ ಕೆಲಸ ಮಾಡಿದ್ದು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ. ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಂಡ್ಯ, ಹಾಗೂ ಜನಪ್ರತಿನಿಧಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.