Monday, November 25, 2024
ಸುದ್ದಿ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ‍್ಯಕ್ರಮ – ಕಹಳೆ ನ್ಯೂಸ್

ಅಂದು ಭಾರತಮಾತೆಯ ಮುಕುಟ, ಚಿನ್ನದ ಕಾಶ್ಮೀರ ಮಣ್ಣಿನಲ್ಲಿ ಹುದುಗಿತ್ತು. ಆದರೆ ಇಂದು ಅದೇ ಕಿರೀಟವನ್ನು ಕೈಗೆತ್ತಿ ತುಕ್ಕು ಬಿಡಿಸಿ ಹೊಳೆಯುವಂತೆ ಮಾಡಿದ ಪುಣ್ಯ ಪುರುಷ ನಮ್ಮ ಪ್ರಧಾನಿಯಾಗಿರುವುದು ನಮ್ಮ ಪುಣ್ಯ. ಆದ್ದರಿಂದ ಈ ರ‍್ಷ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ, ಎಂದು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯರವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಶ್ರೀರಾಮ ಪ್ರೌಢಶಾಲೆಯ ಸ್ವಾತಂತ್ರ‍್ಯ ದಿನಾಚರಣೆ, ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕರ‍್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ ರಕ್ಷಾಬಂಧನ ದಿನವೆನ್ನುವುದು ದಿನಾಚರಣೆಯಲ್ಲ, ಅದು ಸಂಸ್ಕೃತಿಯ ಆಚರಣೆ, ಶಕ್ತಿಯ ಬದಲು ಯುಕ್ತಿಯನ್ನು ಬಳಸಿ ಸಮಾಜದ ಗಂಡಾಂತರವನ್ನು ಹೋಗಲಾಡಿಸುವ ನೀತಿಯನ್ನು ಸಾರುವುದೇ ರಕ್ಷಾಬಂಧನ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ‍್ಯಕ್ರಮದಲ್ಲಿ ಸಂಸ್ಕೃತೋತ್ಸವ ಕಾರ‍್ಯಕ್ರಮದ ಬಗ್ಗೆ ಶ್ರೀರಾಮ ಪದವಿ ವಿಭಾಗದ ಸಂಸ್ಕೃತ ಉಪನ್ಯಾಸಕರಾದ ಲತಾ ಮಾತಾಜಿಯವರು ತಿಳಿಸಿದರು. ಕಾರ‍್ಯಕ್ರಮದಲ್ಲಿ ವಿದ್ಯರ‍್ಥಿಗಳಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಿತು. ಅತಿಥಿಗಳಿಗೆ ಶಾಲಾ ಸಂಸತ್ತಿನ ನಾಯಕರು ರಕ್ಷೆ ಕಟ್ಟಿದರು, ವಿದ್ಯರ‍್ಥಿಗಳು ಪರಸ್ಪರ ರಕ್ಷಾಬಂಧನ ಕಟ್ಟಿ ಬಾಂಧವ್ಯ ಬೆಸೆದರು. ಕಾರ‍್ಯಕ್ರಮದಲ್ಲಿ ರುಕ್ಮಯ ಕೆಳಕೇರಿ, ಸಿದ್ಧಿದೇವತಾ ಆರಾಧಕರ ಸಂಘದ ಪ್ರಮುಖರಾದ ಕೊರಗಪ್ಪ ಪಂಡಿತ್, ಪ್ರೇಮ್ ಬೊಂಡಾಲ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ಸಹಸಂಚಾಲಕರಾದ ರಮೇಶ್ ಎನ್. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವಸಂತಿಕುಮಾರಿ, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯರ‍್ಥಿಗಳು ಉಪಸ್ಥಿತರಿದ್ದರು.