Recent Posts

Sunday, January 19, 2025
ಸುದ್ದಿ

ಭಾರತದ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ವಿಧಿವಶ – ಕಹಳೆ ನ್ಯೂಸ್

ಚೆನ್ನೈ: ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ಗುರುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಭಾರತ ತಂಡದ, ತಮಿಳುನಾಡು ತಂಡದ ಮಾಜಿ ಆರಂಭಿಕ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ ಗುರುವಾರ ಹೃದಯಾಘಾತದಿಂದ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರಿಕೆಟ್ ವಲಯದಲ್ಲಿ ವಿಬಿ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಮ್ಮ ಆಕ್ರಮಣಕಾರಿ ಆಟದಿಂದಲೇ ಖ್ಯಾತಿ ಗಳಿಸಿದ್ದ ಚಂದ್ರಶೇಖರ್ ಅವರು ಆರಂಭಿಕ ಆಟಗಾರನಾಗಿದ್ದರು. ಭಾರತದ ಪರ ಚಂದ್ರಶೇಖರ್ 7 ಏಕದಿನ ಪಂದ್ಯಗಳನ್ನು ಆಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

1988ರಲ್ಲಿ ರಣಜಿ ಟ್ರೋಫಿ ಜಯಿಸಿದ್ದ ತಮಿಳುನಾಡು ತಂಡದ ಆಟಗಾರರಾಗಿದ್ದ ಚಂದ್ರಶೇಖರ್ ಕೋಚಿಂಗ್ ಹಾಗೂ ವೀಕ್ಷಕ ವಿವರಣೆಯತ್ತ ಹೆಚ್ಚು ಗಮನ ನೀಡಿದ್ದರು. ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಇದೀಗ ಅವರ ಅಕಾಲಿಕ ಮರಣಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.