Recent Posts

Monday, January 20, 2025
ಸುದ್ದಿ

ಇಸ್ರೋ ಅಧ್ಯಕ್ಷರಿಗೆ ಕಲಾಂ ಪ್ರಶಸ್ತಿ – ಕಹಳೆ ನ್ಯೂಸ್

ಚೆನ್ನೈ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡಿದ ಗಣನೀಯ ಕೊಡುಗೆಗಾಗಿ ಇಸ್ರೋ ಅಧ್ಯಕ್ಷ ಡಾ.ಕೆ. ಶಿವನ್ ಅವರನ್ನು, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಚಂದ್ರಯಾನ-2 ಸೇರಿದಂತೆ ದೇಶದ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿ ಅವರ ಕೊಡುಗೆ ಗಣನೀಯವಾಗಿದೆ. ತಮಿಳುನಾಡು ಸರ್ಕಾರ ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಧನೆ, ವಿದ್ಯಾರ್ಥಿಗಳ ಕ್ಷೇಮಪಾಲನೆ ಮತ್ತು ಮಾನವಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಈ ಪ್ರಶಸ್ತಿ ನೀಡುತ್ತದೆ. ಐದು ಲಕ್ಷ ರೂ. ನಗದು, 8 ಗ್ರಾಂ ಚಿನ್ನದ ಪದಕ, ಫಲಕ ಒಳಗೊಂಡಿದೆ. ಶಿವನ್ ನಿಗದಿತ ಕಾರ್ಯಕ್ರಮಗಳಲ್ಲಿ ಇರುವುದರಿಂದ ಶೀಘ್ರವೇ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು