Monday, January 20, 2025
ಸುದ್ದಿ

ಹಲ್ಲಿ, ಜಿರಳೆ ಆಯ್ತು.. ಈಗ ತಿರುಪತಿ ಲಾಡಲ್ಲಿ ಸೂಜಿ ಪತ್ತೆ; ತನಿಖೆಗೆ ಆದೇಶ – ಕಹಳೆ ನ್ಯೂಸ್

ತಿರುಪತಿ : ಕೋಟಿ ಕೋಟಿ ಭಕ್ತರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ.. ಅಲ್ಲಿಯ ಪ್ರಸಾದ್ ಲಡ್ಡು ಜಗತ್ತಿನಾದ್ಯಂತ ವಿಖ್ಯಾತಿ ಪಡೆದಿದೆ. ತಿರುಪತಿಗೆ ಹೋದ ಭಕ್ತರು ಲಡ್ಡು ಜೊತೆ ಮರಳುತ್ತಾರೆ. ತಿರುಪತಿ ಲಡ್ಡು ಶ್ರೇಷ್ಠ ಎಂದು ಭಕ್ತರು ನಂಬಿದ್ದಾರೆ. ಆದರೆ ಈ ಹಿಂದೆಯೂ ಲಡ್ಡುವಿನ ಶುಚಿತ್ವದ ಬಗ್ಗೆ ಅನೇಕ ಬಾರಿ ದೂರುಗಳು ಕೇಳಿಬಂದಿತ್ತು. ಈ ಬಾರಿ ಲಡ್ಡುವಿನಲ್ಲಿ ಸೂಜಿ ಕಂಡು ಬಂದ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಶಾಂಕ್ ರೆಡ್ಡಿ ಎಂಬ ಭಕ್ತರೊಬ್ಬರು ಮಂಗಳವಾರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಬಳಿಕ ಲಡ್ಡು ಖರೀದಿಸಿದ್ದಾರೆ. ಮನೆಗೆ ತೆಗೆದುಕೊಂಡು ಬಂದು ತಿನ್ನುವಾಗ ಪ್ರಸಾದದಲ್ಲಿ ಸೂಜಿ ಪತ್ತೆಯಾಗಿದೆ ಎಂದು ಶಶಾಂಕ್ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಲಾಡು ತಯಾರಿಕೆ ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ, ಅಚಾತುರ್ಯದ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.