Tuesday, January 21, 2025
ಸುದ್ದಿ

ಸ್ವಂತ ಖರ್ಚಿನಿಂದ ಸುಳ್ಯ ಸರಕಾರಿ ಆಸ್ಪತ್ರೆ ರಸ್ತೆ ದುರಸ್ತಿ – ಕಹಳೆ ನ್ಯೂಸ್

ಸುಳ್ಯ : ಸುಳ್ಯ ತಾಲೂಕು ಆಸ್ಪತ್ರೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದೆ. ಇದರ ದುರಸ್ತಿಯನ್ನು ಗುತ್ತಿಗೆದಾರರಾದ ಬಾಲಚಂದ್ರ ಅಡ್ಕಾರು, ತೀರ್ಥಕುಮಾರ್ ಕುಂಚಡ್ಕರವರು ತಮ್ಮ ಸ್ವಂತ ಖರ್ಚಿನಿಂದ ಮಾಡುತ್ತಿದ್ದಾರೆ. ಆಗಸ್ಟ್ 15ರಿಂದ ದುರಸ್ತಿಕಾರ್ಯ ಆರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರಿ ಆಸ್ಪತ್ರೆಯಿಂದ ಮುಖ್ಯ ರಸ್ತೆ ಸಮೀಪಿಸುವ ಸುಮಾರು 50 ಮೀಟರ್ ರಸ್ತೆ ದುಸ್ಥಿತಿಯಲ್ಲಿದ್ದು, ಸಂಚಾರ ಕಷ್ಟವಾಗುತ್ತಿತ್ತು. ಈ ಬಗ್ಗೆ ಶಾಸಕರಿಗೆ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಪತ್ರಿಕೆಗಳಲ್ಲೂ ರಸ್ತೆಯ ಅವ್ಯವಸ್ಥೆಯ ಬಗ್ಗೆ ವರದಿ ಪ್ರಕಟಗೊಂಡಿತ್ತು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹನುಮಂತರಾಯಪ್ಪ ಹಾಗೂ ಇಂಜಿನಿಯರ್ ಹುಕ್ಕೇರಿಯವರು ತಮ್ಮ ಇಲಾಖೆಯ ಗುತ್ತಿಗೆದಾರರಾದ ಬಾಲಚಂದ್ರ ಅಡ್ಕಾರು ಹಾಗೂ ತೀರ್ಥಕುಮಾರ್ ಕುಂಚಡ್ಕರಿಗೆ ರಸ್ತೆಯ ಕುರಿತು ಹೇಳಿದಾಗ ಅವರಿಬ್ಬರೂ ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಲು ಮುಂದೆ ಬಂದರು. ಆಗಸ್ಟ್ 15 ರಂದು ಇಬ್ಬರು ಗುತ್ತಿಗೆದಾರರು ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ಅಂಗಾರರು ಭೇಟಿ ನೀಡಿದ್ದಾರೆ. ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಇಇ ಹನುಮಂತರಾಯಪ್ಪ, ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.