Recent Posts

Sunday, January 19, 2025
ಸುದ್ದಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆಯ ಆರೋಗ್ಯ ಹದಗೆಟ್ಟ ಹಿನ್ನಲೆ; ಆನೆಗೆ ತಜ್ಞ ವೈದ್ಯರಿಂದ ಚಿಕಿತ್ಸೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆಗೆ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ನಾಗಾರಹೊಳೆ ಅಭಯಾರಣ್ಯದ ದುಬಾರೆ ವನ್ಯಸಂರಕ್ಷಣೆ ವಿಭಾಗ ತಜ್ಞ ವೈದ್ಯ ಡಾ. ಶೆಟ್ಟಿಯಪ್ಪ ಆಗಮಿಸಿ ಶೆಡ್‍ನಲ್ಲಿರುವ ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುತ್ತಿಗಾರು ಪಶುವೈದ್ಯ ಕೇಂದ್ರದ ವೈದ್ಯ ಡಾ. ವೆಂಕಟಾಚಲಪತಿ ಸಹಕಾರದಲ್ಲಿ ಆನೆಗೆ ಚಿಕಿತ್ಸೆ ನೀಡಲಾಯಿತು. ಆನೆಯು ಅಜೀರ್ಣದಿಂದ ಬಳಲುತ್ತಿದ್ದು ತಿಂದ ಆಹಾರ ಜೀರ್ಣವಾಗುತಿರಲಿಲ್ಲ. ದೇಹ ಉಷ್ಣತೆಯಿಂದ ಆಹಾರ ಜೀರ್ಣವಾಗುತ್ತಿರಲಿಲ್ಲ, ಲದ್ದಿ ಹಾಕಲು ಅದಕ್ಕೆ ಸಾಧ್ಯವಾಗದೆ ಒದ್ದಾಟ ನಡೆಸುತ್ತಿತ್ತು. ತಿಂದ ಆಹಾರ ಹೊಟ್ಟೆಯಲ್ಲಿ ಕರಗದೆ ಸೊಪ್ಪುವಿನ ನಾರು ಲದ್ದಿ ಜತೆ ಸುತ್ತಿಕೊಂಡು ಲದ್ದಿ ಹಾಕಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವ ಸಾಧ್ಯತೆ ಇದೆ ಎಂದು ಆನೆಯ ಆರೋಗ್ಯ ಪರೀಕ್ಷಿಸಿದ ವೈದ್ಯರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆನೆಗೆ ಆಹಾರ ಕರಗಲು ಔಷಧಿ ನೀಡಲಾಗಿದೆ. ದ್ರವ ರೂಪದಲ್ಲೂ ಔಷಧಿ ನೀಡಲಾಗಿದೆ. ದೇಹದಲ್ಲಿ ನೀರಿನಂಶ ಹೆಚ್ಚಿಸಲು ತುಸು ಬೆಚ್ಚಗಿನ ನೀರು ಕುಡಿಸಲಾಗುತ್ತಿದೆ. ಜತೆಗೆ ಮೃದು ಆಹಾರವನ್ನು ನೀಡಲಾಗುತ್ತಿದೆ. ಆನೆಯು ಸ್ವಲ್ಪವೇ ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಆನೆಗೆ ಚಿಕಿತ್ಸೆ ನೀಡಲು ಸ್ಥಳಿಯವಾಗಿ ಔಷಧಿ ಕೊರತೆ ಇದೆ. ಹೀಗಾಗಿ ಅಗತ್ಯದ ಔಷಧಿಗಾಗಿ ದೂರದ ಪುತ್ತೂರು, ಮಂಗಳೂರು ತನಕ ತೆರಳಬೇಕಾಗುತ್ತದೆ. ತತ್‍ಕ್ಷಣಕ್ಕೆ ಇಲ್ಲಿಯೆ ಔಷಧಿಗಳು ಸಿಗದೆ ಇರುವ ಕಾರಣ ಬಹಳಷ್ಟು ಕಷ್ಟವಾಗುತ್ತಿದೆ. ಆನೆಯ ಆರೋಗ್ಯ ಸುಧಾರಣೆಗೆ ಸಾಕಷ್ಟು ಕಾಳಜಿ ವಹಿಸಿ ಶ್ರಮ ವಹಿಸಲಾಗುತ್ತಿದೆ ಎಂದು ಕಳೆದ ನಾಲ್ಕು ದಿನಗಳಿಂದ ಹಗಲು ರಾತ್ರಿ ಶೆಡ್‍ನಲ್ಲೆ ಇದ್ದು ಆನೆಗೆ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯ ಡಾ.ವೆಂಕಟಾಚಲಪತಿ ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಆನೆಯ ಆರೋಗ್ಯ ವಿಚಾರಿಸಲು ಆನೆಯ ಅಭಿಮಾನಿಗಳು ಶೆಡ್‍ನತ್ತ ತೆರಳುತಿದ್ದಾರೆ. ಶೀಘ್ರವೇ ಗುಣಮುಖಗೊಂಡು ಎಂದಿನಂತೆ ಇರುವಂತಾಗಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ.