ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಧ್ವಜ ಹಾಕಿದ ಮಹಮ್ಮದ್ ನದಿಮ್ : ಬಂಟ್ವಾಳ ಶಾಸಕರಿಂದ ಕಠಿಣ ಕ್ರಮಕ್ಕೆ ಆಗ್ರಹ – ಕಹಳೆ ನ್ಯೂಸ್
ಬಂಟ್ವಾಳ : ಸಾಮಾಜಿಕ ಜಾಲತಾಣದಲ್ಲಿ ಕಲಾಬಾಗಿಲಿನ ಮಹಮ್ಮದ್ ನದಿಮ್ ಎಂಬಾತ ಸ್ವಾತಂತ್ರ್ಯ ದಿನಾಚರಣೆಯ ದಿನ ವಿದೇಶದಲ್ಲಿದ್ದುಕೊಂಡು, ಪಾಕಿಸ್ತಾನದ ಧ್ವಜದ ಚಿತ್ರಹಾಕಿ ದೇಶ ದ್ರೋಹ ಕೆಲಸ ಮಾಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಆರೋಪಿಯು ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗಿದ್ದು, ಬಂಟ್ವಾಳದಲ್ಲಿ ಶಾಂತಿ ಕದಡುವ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಕ್ಷಣವೇ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.