Sunday, November 24, 2024
ಸುದ್ದಿ

Breaking News : ಸಾಮಾಜಿಕ ಜಾಲತಾಣದಲ್ಲಿ ಆರ್.ಎಸ್‌.ಎಸ್ ಹಾಗೂ ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ; ಭೂ – ಮಾಪನ ಕಚೇರಿ ಸಿಬ್ಬಂದಿ ಮಹೇಶ್ ವಿರುದ್ಧ ಸಂಘಪರಿವಾರ ಕಡಬ ಠಾಣೆಗೆ ದೂರು – ಕಹಳೆ ನ್ಯೂಸ್

ಕಡಬ : ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ಕಡಬ ಭೂ-ಮಾಪನ ಕಚೇರಿಯ ಸಿಬ್ಬಂದಿ ಮಹೇಶ್ ವಿರುದ್ಧ ಸಂಘ ಪರಿವಾರ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕುತ್ಯಾಡಿ ಇವರಿಂದ ಕಡಬ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಯನ್ನು ಪೋಲಿಸರು ತನಿಖೆ ನಡೆಸಿದ್ದಾರೆ. ಕಡಬ ಪೊಲೀಸ್ ಠಾಣೆಯ ಎದುರು ಹಲವಾರು ಹಿಂದೂ ಮುಖಂಡರು ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್. ಐ. ಪ್ರಕಾಶ್ ದೇವಾಡಿಗ ಕಹಳೆ ಜೊತೆ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು