ಸುಳ್ಯದ ಶಾರದಾ ವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ, ಕಾವ್ಯೋತ್ಸವ ಮತ್ತು ಕವನ ಕಮ್ಮಟ ಕಾರ್ಯಕ್ರಮ – ಕಹಳೆ ನ್ಯೂಸ್
ಸುಳ್ಯ: ಚಂದನ ಸಾಹಿತ್ಯ ವೇದಿಕೆ ಸುಳ್ಯ ಆಯೋಜಿಸಿದ ಶಿಕ್ಷಣ ತಜ್ಞ ಡಾ. ಕುರುಂಜಿ ವೆಂಕಟರಮಣಗೌಡರ 6ನೇ ವರ್ಷದ ಪುಣ್ಯತಿಥಿ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ, ಸುಳ್ಯ ನಗರದ ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ಇರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಶಾರದಾ ವಿದ್ಯಾಲಯದ ಸಹಕಾರದಿಂದ ಸ್ವಾತಂತ್ರೋತ್ಸವ ಕಾವ್ಯೋತ್ಸವ ಮತ್ತು ಕವನ ಕಮ್ಮಟ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ಜರುಗಿತು.
ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕವನ ಕಮ್ಮಟ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು. ಸ್ವಾಮೀಜಿಯವರ 159ನೇ ಕೃತಿ `ಬಿತ್ತಿದಂತೆ ಬೆಳೆ’ ಪುಸ್ತಕವನ್ನು ಭೀಮರಾವ್ ವಾಷ್ಠರ್ ಲೋಕಾರ್ಪಣೆ ಮಾಡಿದರು.
ಕಲಾವಿದ ಜೂನಿಯರ್ ಟೈಗರ್ ಪ್ರಭಾಕರ್ ಖ್ಯಾತಿಯ ನಾಗರಾಜ್ ಕುಂದಾಪುರ , ಶಾರದಾ ವಿದ್ಯಾಲಯದ ಮುಖ್ಯೋಪಾಧ್ಯಾಯೆ ಶಾರದಾ, ಶಿಕ್ಷಕಿ ಸಂಧ್ಯಾ, ಕುಮಾರ್ ಉಬರಡ್ಕ ಮತ್ತು ಪ್ರಣವಿ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾರದಾ ರವರ ಸಾಧನೆ ಗುರುತಿಸಿ ಚಂದನ ಸಾಹಿತ್ಯ ವೇದಿಕೆಯಿಂದ ಸನ್ಮಾನಿಸಲಾಯಿತು.
ಕಾವ್ಯೋತ್ಸವದಲ್ಲಿ 18 ಜನ ಹಿರಿಯ ಕಿರಿಯ ಕವಿಗಳು ಕವನ ವಾಚನ ಮಾಡಿದರು. ಎಲ್ಲ ಕವಿಗಳಿಗೆ ಅಮೂಲ್ಯ ಸಾಹಿತ್ಯ ಕೃತಿಗಳನ್ನು ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು ಮಾಸ್ಟರ್ ಸಾಯಿ ಪ್ರಶಾಂತ್ ದೇಶಭಕ್ತಿಗೀತೆ ಹಾಡಿದರು. ಕೀರ್ತಿ ಸ್ವಾಗತಿಸಿ, ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.