ಶ್ರೀನಗರ: ಹಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಗಿತವಾಗಿದ್ದ ಇಂಟರ್ನೆಟ್ ಸೇವೆಯನ್ನು ಪುನಾರಾರಂಭಿಸಲಾಗಿದೆ. ಜಮ್ಮು, ಉಧಮ್ ಪುರ, ಕಥುವಾ, ಸಾಂಬಾಗಳಲ್ಲಿ ಶುಕ್ರವಾರ ರಾತ್ರಿಯಿಂದ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಲಾಗಿದೆ.
ಆರ್ಟಿಕಲ್ 370 ಮತ್ತು 35ಎ ಅನ್ನು ರದ್ದುಗೊಳಿಸುವ ಹಿನ್ನಲೆಯಲ್ಲಿ ಭದ್ರತೆಯ ಸಲುವಾಗಿ ಆಗಸ್ಟ್ 5ರಿಂದ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
12 ದಿನಗಳ ನಂತರ ಜಮ್ಮುವಿನಲ್ಲಿ ಇಂಟರ್ನೆಟ್ ಸೇವೆ ಆರಂಭಿಸಲಾಗಿದೆ. ಆದರೆ ಕೇವಲ 2ಜಿ ನೆಟ್ ವರ್ಕ್ ಮಾತ್ರ ಲಭ್ಯವಾಗಲಿದೆ. ರಾಂಬಾನ್, ಕಿಶ್ತ್ವರ್ ಮತ್ತು ದೋಡಾ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗಿನಿಂದ ಲ್ಯಾಂಡ್ ಲೈನ್ ಫೋನ್‍ಗಳಿಗೆ ಮರು ಸಂಪರ್ಕ ನೀಡಲಾಗಿದೆ. ರಜೌರಿ ಮತ್ತು ಪೂಂಛ್‍ನಲ್ಲಿ ಕೂಡಾ ಲ್ಯಾಂಡ್ ಲೈನ್ ಸೇವೆ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.