ನಾವು ನಾಲ್ವರಿದ್ದೇವೆ, ನಮ್ಮೊಂದಿಗೆ ಅಡ್ಜೆಸ್ಟ್ ಮಾಡಕೊಳ್ತೀಯಾ ಎಂದಿದ್ದರು ಆ ತಮಿಳು ನಿರ್ದೇಶಕರು – ಕಹಳೆ ನ್ಯೂಸ್
ಬೆಂಗಳೂರು : ನಟಿಯಾಗಬೇಕು ಎಂದುಕೊಂಡ ನನಗೆ ತಮಿಳು ನಿರ್ದೇಶಕರಿಂದ ಕೇಳಿದ ಪ್ರಶ್ನೆ ಅಡ್ಜೆಸ್ಟ್ ಮಾಡುಕೊಳುತ್ತೀಯಾ. ಈ ರೀತಿ ಸ್ಪೋಟಕ ಮಾಹಿತಿ ತಿಳಿಸಿರುವುದು ಕನ್ನಡದ ನಟಿ ಶೃತಿ ಹರಿಹರನ್.
ಹೈದ್ರಾಬಾದ್’ನಲ್ಲಿ ಇಂಡಿಯಾ ಟುಡೇ ನಡೆಸಿದ ‘ಸೆಕ್ಸಿಸಮ್ ಇನ್ ಸಿನಿಮಾ’ ಕುರಿತ ಕಾರ್ಯಕ್ರಮದಲ್ಲಿ ತಮ್ಮ ಜೀವನದಲ್ಲಿ ನಡೆದ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನೃತ್ಯಪಟುವಾಗಿ ಹೆಸರು ಮಾಡಿದ್ದ ನನಗೆ ಸಿನಿಮಾ ನಟಿಯಾಗುವ ಕನಸಿತ್ತು. ಆಗ ತಮಿಳು ನಿರ್ದೇಶಕರೊಬ್ಬರು ನಾವು ಐದು ಮಂದಿ ಇದ್ದೇವೆ. ನಮ್ಮೊಟ್ಟಿಗೆ ಅಡ್ಜೆಸ್ಟ್ ಮಾಡಿಕೊಂಡರೆ ಸಿನಿಮಾ ನಟಿಯಾಗಬಹುದು ಎಂದರು. ಆ ಕ್ಷಣ ನನಗೆ ಏನು ಮಾಡಬೇಕೆಂದು ತಿಳಿಯದೆ ಕಣ್ಣೀರು ಹಾಕಿ ಅದನ್ನು ದಿಟ್ಟವಾಗಿ ನಿರಾಕರಿಸಿ ಬಂದಿದ್ದೆ ಎಂದು ಹಳೆಯ ಕಹಿ ನೆನೆಪನ್ನು ಹಂಚಿಕೊಂಡಿದ್ದಾರೆ.
ಇದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಮತ್ತೆ ಯಾವತ್ತು ಇಂತಹ ಅನುಭವವಾಗಿಲ್ಲ. ಈ ಘಟನೆಯಿಂದ ತಮಿಳು ಸಿನಿಮಾ ರಂಗದಿಂದ ಉತ್ತಮ ಅವಕಾಶ ಸಿಕ್ಕಿದರೂ ನಾನು ತಮಿಳು ಆಫರ್ ಮೊದಲು ಸ್ವೀಕರಿಸಲಿಲ್ಲ. ಈ ಅನುಭವವಾದ ನಾಲ್ಕು ವರ್ಷದ ಬಳಿಕ ಕನ್ನಡದ ನನ್ನ ಚಿತ್ರದ ಹಕ್ಕೊಂದನ್ನು ಈಗ ತಮಿಳು ನಿರ್ಮಾಪಕರು ಖರೀದಿಸಿದ್ದು, ತಮಿಳು ರಿಮೇಕ್’ನಲ್ಲಿ ನನಗೆ ಪಾತ್ರ ನಿರ್ವಹಿಸಲು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಒಂದು ಸಮಿತಿ ಅವಶ್ಯಕವಿದ್ದು, ಈ ಮೂಲಕ ನಟಿಯರ ಹಕ್ಕು ರಕ್ಷಣೆಯಾಗಬೇಕು. ಇದರಿಂದ ಈ ಕ್ಷೇತ್ರದಲ್ಲಿ ಮುಂದುವರೆಯುವ ನಮ್ಮ ಕನಸು ನನಸಾಗಲು ಸಾಧ್ಯ ಎಂದು ತಮ್ಮ ಅನುಭವ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಶೃತಿಹರಿಹರನ್.
ವರದಿ : ಕಹಳೆ ನ್ಯೂಸ್