ವಾಷಿಂಗ್ಟನ್: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಂದು ಶಾಕ್ ನೀಡಿದ್ದು, ಪಾಕಿಸ್ತಾನಕ್ಕೆ ನೀಡುವ ಆರ್ಥಿಕ ನೆರವಿನಲ್ಲಿ ೪೪೦ ಮಿಲಿಯನ್ ಡಾಲರ್ 3,1೦೦ ಕೋಟಿ ರೂ ಅನ್ನು ಕಡಿತ ಮಾಡಿದೆ.
ಅಮೆರಿಕವು ಪಾಕಿಸ್ತಾನದ ಬಲವರ್ಧನೆಗಾಗಿ ಪಾಲುದಾರಿಕೆ ಒಪ್ಪಂದದ ಅನ್ವಯ ಪಾಕಿಸ್ತಾನಕ್ಕೆ ನೆರವು ನೀಡಲು ನಿರ್ಧರಿಸಿತ್ತು. ಅದರ ಅನ್ವಯ ಕೆರ್ರಿ ಲ್ಯೂಗರ್ ಬರ್ಮನ್ ಕಾಯ್ದೆ ಅನ್ವಯ 5 ವರ್ಷಗಳ ಅವಧಿಯಲ್ಲಿ 7.5 ಬಿಲಿಯನ್ ಡಾಲರ್ ನೆರವು ನೀಡಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ ನೀಡಿತ್ತು.
ಪ್ರಸ್ತುತ ಕೆ.ಎಲ್.ಬಿ ಕಾಯ್ದೆ ಅನ್ವಯ ಪಾಕಿಸ್ತಾನಕ್ಕೆ 4.5 ಬಿಲಿಯನ್ ಡಾಲರ್ ನೆರವು ನೀಡಬೇಕಿತ್ತು. ಅದರಲ್ಲಿ 440 ಮಿಲಿಯನ್ ಡಾಲರ್ ನೆರವನ್ನು ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕೇವಲ 4.1 ಬಿಲಿಯನ್ ಡಾಲರ್ ನೆರವು ನೀಡಲಿದೆ.