Sunday, November 24, 2024
ಸುದ್ದಿ

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ವಿಶೇಷ ರೀತಿಯಲ್ಲಿ ರಕ್ಷ ಬಂಧನ ಆಚರಣೆ – ಕಹಳೆ ನ್ಯೂಸ್

ಸಹೋದರ ಸಹೋದರಿಯ ಪವಿತ್ರ ಸಂಬಂಧದ ರಕ್ಷಾಬಂಧನ ಕಾರ್ಯಕ್ರಮವನ್ನು ಕಲ್ಲಡ್ಕ ಶ್ರೀರಾಮ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಪಾಕಶಾಲಾ ಸಿಬ್ಬಂದಿ ಹಾಗೂ ಸ್ವಚ್ಚತಾ ಕಾರ್ಯ ನಿರ್ವಹಿಸುತಿದ್ದ ಸಿಬ್ಬಂದಿಗಳ ಜೊತೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

“ರಕ್ಷೆಯಲ್ಲಿ ಒಂದು ಹಗ್ಗ ಹಾಗೂ ಅದರಲ್ಲಿ ನೂರಾರು ಕೇಸರಿ ಎಳೆಗಳಿವೆ. ಈ ಎಳೆಗಳನ್ನು ಬೇರೆ ಬೇರೆಯಾಗಿ ಇಟ್ಟರೆ ಅದು ಗಾಳಿಗೆ ತೂರಿ ಹೋಗುತ್ತದೆ. ಒಂದು ನೂಲಿನಿಂದ ಜೋಡಿಸಿದಾಗ ಬಲ ಬರುತ್ತದೆ. ಹಾಗಾಗಿ ರಕ್ಷೆ ಎನ್ನುವುದು ಒಗ್ಗಟ್ಟಿನ ಸಂಕೇತವೂ ಆಗಿದೆ. ಇತ್ತೀಚಿಗೆ ರಕ್ಷಾಬಂಧನ ಅಣ್ಣ ತಂಗಿಯ ಬಾಂಧ್ಯವದಿಂದ ವಿಕಸಿತಗೊಂಡು ಸಾರ್ವತ್ರಿಕ ಆಚರಣೆಯಾಗಿದೆ. ಜನರು ಪರಸ್ಪರ ರಕ್ಷೆ ಕಟ್ಟಿಕೊಂಡು ಸಮಾಜದ ರಕ್ಷಣೆಗೆ ಮುಂದಾಗುವ ಸಂಕಲ್ಪ ಮಾಡಬೇಕು. ರಕ್ಷಾಬಂಧನದ ಜೊತೆ ವೃಕ್ಷಾಬಂಧನವನ್ನೂ ಮಾಡಬೇಕು” ಎಂದು ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ್ ರಕ್ಷಾಬಂಧನದ ಮಹತ್ವ ತಿಳಿಸುತ್ತಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ತಾಂಬೂಲ ನೀಡಿ ಸ್ವಾಗತಿಸಲಾಯಿತು. ನಂತರ ರವಿಕೆಕಣ, ಬಳೆ ಹಾಗೂ ಶಾಲು ಹೊದಿಸಿ ಗೌರವಾರ್ಪಿಸಲಾಯಿತು. ಹಾಗೆಯೇ ವಿದ್ಯಾರ್ಥಿನಿಯರು ಅತಿಥಿಗಳಿಗೆ ರಕ್ಷೆ ಕಟ್ಟಿ ಆರ್ಶಿವಾದ ಪಡೆದರು.
5ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದು ಕೊಳಕ್ಕೀರುನಲ್ಲಿರುವ ಆಕೃತಿ ಕಲಾಕೇಂದ್ರ ಹೋಗಿ ಅಲ್ಲಿಯ ಸಿಬ್ಬಂದಿಗಳ ಜೊತೆ ರಕ್ಷಾಬಂಧನ ಆಚರಿಸಿದರು. ಕಲಾಕೇಂದ್ರದ ಮಾಲೀಕ ನಾಗೇಶ್ ಅವರು ರಕ್ಷಾಬಂಧನದ ಮಹತ್ವ ತಿಳಿಸಿದರು. ನಂತರ ಪೂರ್ಲಿಪ್ಪಾಡಿ ಪಂಚವಟಿ ಹೊಲೋ ಬ್ಲಾಕ್ ಇಂಡಸ್ಟ್ರೀಸ್‍ಗೆ ಭೇಟಿಯಿತ್ತು ಅಲ್ಲಿಯ ಸಿಬ್ಬಂದಿಗಳ ಜೊತೆಯೂ ರಕ್ಷಾಬಂಧನ ಆಚರಿಸಿ ಸಿಹಿ ಹಂಚಿದರು. ಅಧ್ಯಾಪಕರಾದ ದೇವಿಕಾ ಹಾಗೂ ರೇಷ್ಮಾರವರು ಜೊತೆಯಿದ್ದರು.
ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ್ ಭಟ್, ಲಕ್ಷ್ಮೀ ರಘುರಾಜ್, ಮಲ್ಲಿಕಾ ಶೆಟ್ಟಿ, ಪಾಕಶಾಲೆಯಲ್ಲಿ ಹಾಗೂ ಸ್ವಚ್ಛತ ಕಾರ್ಯದಲ್ಲಿ ತೊಡಗಿಸಿಕೊಂಡಿರುವಂತಹ ಸಂತೋಷ, ರಾಜೇಶ್, ಮೀನಾಕ್ಷಿ, ಲತಾ, ಜಯಲಕ್ಷ್ಮೀ, ಗೀತಾ, ಬಾಬಣ್ಣ, ಸುಂದರ, ರಾಜೇಶ್ವರಿ, ಪೂರ್ಣಿಮಾ, ಗೀತಾಲಕ್ಷ್ಮೀ, ಸುಮತಿ, ಲೀಲಾವತಿ, ನಾರಾಯಣಿ, ಸರೋಜಿನಿ, ತುಳಸಿ, ಭಾಗೀರಥಿ, ಕಲ್ಯಾಣಿ, ವಿಶಾಲಾಕ್ಷಿ, ಧನವತಿ, ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.