Saturday, November 23, 2024
ಸುದ್ದಿ

ವಿವೇಕಾನಂದ ಕಾಲೇಜು: ‘ವಿಕಾಸಂ’ ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಸಂಸ್ಕೃತ ಭಾಷೆಯೂ ಲೋಕಕ್ಕೆ ವೇದಗಳ ಮೂಲಕ ಜ್ಞಾನವನ್ನು ಕೊಡುಗೆಯಾಗಿ ನೀಡಿದೆ. ಆ ಜ್ಞಾನದಿಂದ ಮಾತ್ರವೇ ಮನುಷ್ಯ ವಿವೇಕವನ್ನು ಪಡೆಯಲು ಸಾಧ್ಯ. ಜ್ಞಾನ ಎನ್ನುವುದು ಅನುಭವಗಳಿಂದ ಕೂಡಿದ ಗುಚ್ಛವಾಗಿದೆ. ಸಂಸ್ಕೃತ ಎನ್ನುವುದು ಒಂದು ಭಾಷೆ ಎನ್ನುವುದಕ್ಕಿಂತ ಒಂದು ಸಂಸ್ಕೃತಿಯ ಅಂಗ ಎಂದರೆ ತಪ್ಪಾಗದು. ಕಲಿಯುಗದಲ್ಲಿ ಮನುಷ್ಯನಲ್ಲಿ ಮನುಷ್ಯತ್ವ ಕಡಿಮೆಯಾಗುವುತ್ತಿರುವುದು ಬೇಸರದ ವಿಚಾರ. ಸಂಸ್ಕೃತ ಪಠಿಸುವುದರಿಂದ ಮನುಷ್ಯತ್ವ ಬೆಳೆಯುತ್ತದೆ ಎಂದು ಪ್ರಾಚ್ಯ ವಿದ್ವಾಂಸ ವೇದಮೂರ್ತಿ ಶ್ರೀನಿವಾಸ ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ “ವಿಕಾಸಂ” ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳು ಹಾಗೂ ಗುರುಪೂರ್ಣಿಮೆ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶರೀರ ಎಂಬ ರಥವನ್ನು ಮನಸ್ಸೆಂಬ ಸಾರಥಿ ಮುನ್ನಡೆಸುತ್ತದೆ. ಆದುದರಿಂದ ಚಂಚಲವಾಗಿರುವ ಮನಸ್ಸನ್ನು ಹತೋಟಿಯಲ್ಲಿಡುವುದು ಮುಖ್ಯ. ಆಗಲೇ ಬದುಕಿನ ಹಾದಿಯು ಸುಗಮವಾಗಿರುತ್ತದೆ. ಅದರಂತೆ ವಿದ್ಯಾರ್ಥಿಗಳು ಉತ್ತಮ ವಿದ್ಯೆಯನ್ನು ಪಡೆಯಲು ಸುಖವನ್ನು ತ್ಯಜಿಸಬೇಕಾಗಿದೆ. ಆಗ ಮಾತ್ರವೇ ಜ್ಞಾನವೆಂಬ ಬೆಳಕು ಅಜ್ಞಾನವೆಂಬ ಅಂಧಕಾರವನ್ನು ನೀಗಿಸಲು ಸಾಧ್ಯ. ಏಕಾಗ್ರತೆ ಹಾಗೂ ಬ್ರಹ್ಮಚರ್ಯದಿಂದ ಶಿಕ್ಷಣ ಎಂಬ ಸಾರ್ಥಕ್ಯವನ್ನು ಹೊಂದಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಬಗ್ಗೆ ವಿಶೇಷವಾದ ಒಲವನ್ನು ಹೊಂದಿರಬೇಕು. ಅದರೊಂದಿಗೆ ಅಧ್ಯಯನವನ್ನು ಮಾಡಿದರೆ ಮಾತ್ರ ಜ್ಞಾನವನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಮೂಲ ಮಾಹಿತಿಬೇಕಾದರೆ ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ನಡೆಸುವುದು ಉತ್ತಮ. ಸಂಶೋಧನೆಗೆ ಅಗತ್ಯವಾದ ಅಧಿಕೃತ ಮಾಹಿತಿಗಳು ಸಂಸ್ಕೃತ ಭಾಷೆಯಲ್ಲಿ ಲಭ್ಯವಿರುತ್ತದೆ. ಪ್ರಯೋಗಶೀಲತೆಯಿಂದ ವಿಕಾಸದ ಹಾದಿಯಲ್ಲಿ ಸಾಗಬಹುದು, ಆದುದರಿಂದ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ. ಮಾತನಾಡಿ ಶುಭಹಾರೈಸಿದರು. ಸಂಸ್ಕೃತ ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಎಮ್.ಕೆ. ಪ್ರಸ್ತಾವನೆಗೈದರು.

ವಿದ್ಯಾರ್ಥಿನಿ ಸ್ವಾತಿ ಪ್ರಾರ್ಥಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಸ್ನೇಹಗೌರಿ ಟಿ. ಸ್ವಾಗತಿಸಿದರು. ಕಾರ್ಯದರ್ಶಿ ಶರಣ್ಯ ವಂದಿಸಿ, ವರ್ಷ ಕಾರ್ಯಕ್ರಮ ನಿರೂಪಿಸಿದರು.