Recent Posts

Sunday, January 19, 2025
ಸುದ್ದಿ

ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಸೈನಿಕ ಹುತಾತ್ಮ- ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನಡೆದ ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿರುವ ಘಟನೆ ನಡೆದಿದೆ.

ಎಲ್‍ಓಸಿಯಲ್ಲಿ ಪಾಕಿಸ್ತಾನದ ನಾಲ್ವರು ಸೈನಿಕರನ್ನು ಭಾರತೀಯರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಲ್ಯಾನ್ಸ್ ನಾಯ್ಕ್ ಸಂದೀಪ್ ಥಾಪಾ(35) ಹುತಾತ್ಮರಾಗಿದ್ದಾರೆ. ರಾಜೌರಿ ಜಿಲ್ಲೆಯ ನೌಶೇರಾ ಪ್ರದೇಶದಲ್ಲಿ ಪಾಕಿಸ್ತಾನಿಗಳು ಗುಂಡಿನ ಸುರಿಮಳೆ ಗೈದಿದ್ದರು. ಸಂದರ್ಭದಲ್ಲಿ ಸೈನಿಕರಿಗೆ ಗಂಭೀರ ಗಾಯಗಳಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಡಿಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಗಿದೆ. ಎರಡೂ ಕಡೆಗಳಿಂದ ಗುಂಡಿನ ದಾಳಿ ನಡೆಯಿತು. ಕಳೆದ ತಿಂಗಳು ಪೂಂಚ್ ಹಾಗೂ ರಾಜೌರಿಯಲ್ಲಿ ಇದೇ ರೀತಿ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರೂ ಸೇರಿದಂತೆ 10ದಿನದ ಹಸುಗೂಸು ಮೃತಪಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈಗಾಗಲೇ ವಿಮಾನ, ರೈಲು ಸೇವೆ ಸ್ಥಗಿತಗೊಳಿಸಿದೆ. ಜೊತೆಗೆ ಚೀನಾ ಸಹಾಯದೊಂದಿಗೆ ಭದ್ರತಾ ಮಂಡಳಿ ಸಭೆ ನಡೆಸಲೂ ಕೂಡ ಒತ್ತಾಯಿಸಿತ್ತು.