Recent Posts

Sunday, January 19, 2025
ಸುದ್ದಿ

ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಪರಿಸರದ ರೈತರಿಗೆ ನೆರವಾದ ಶ್ರೀ ರಾಮಚಂದ್ರಾಪುರ ಮಠ- ಕಹಳೆ ನ್ಯೂಸ್

ಬೆಳ್ತಂಗಡಿ: ಇತ್ತೀಚೆಗೆ ವಿನಾಶಕಾರಿಯಾಗಿ ಸುರಿದ ಭಾರಿ ಮಳೆಯಿಂದಾಗಿ ಎಲ್ಲಾ ವಿಧಗಳಲ್ಲೂ ಸಂತ್ರಸ್ತರಾದ ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಪರಿಸರದ ರೈತರಿಗೆ ಶ್ರೀ ರಾಮಚಂದ್ರಾಪುರ ಮಠವು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸ್ಪಂದಿಸಿದೆ.

ತನ್ನ ಗೋಪರಿವಾರ ಟ್ರಸ್ಟ್ ನ ಸಹಯೋಗದಲ್ಲಿ ಮಂಡ್ಯದಿಂದ ಒಂದು ಲೋಡ್ ಬೈಹುಲ್ಲನ್ನು ತಂದು ಚಾರ್ಮಾಡಿಯ ತಾತ್ಕಾಲಿಕ ಗೋಶಾಲೆ, ಕುಕ್ಕಾವು ಹಾಗೂ ಕೊಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದ ಈ ಸೇವಾಕಾರ್ಯವನ್ನು ಉಪ್ಪಿನಂಗಡಿ ಮಂಡಲವು ಸಂಯೋಜಿಸಿತ್ತು. ವೇಣೂರು ಪರಮೇಶ್ವರ ಭಟ್, ಮಹೇಶ ಭಟ್ ಕುದುಪುಲ, ಉದಯಶಂಕರ ಅರಸಿನಮಕ್ಕಿ, ಶ್ಯಾಮ ಪ್ರಸಾದ್ ನಡ, ಶ್ರೀಕೃಷ್ಣಭಟ್ ಕಾಶಿಬೆಟ್ಟು, ಅನಂತ ಭಟ್ ಮಚ್ಚಿಮಲೆ ಬೈಹುಲ್ಲು ವಿತರಿಸುವಲ್ಲಿ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು