Recent Posts

Sunday, January 19, 2025
ಸುದ್ದಿ

ಪುತ್ತೂರು: ಮಠಂತಬೆಟ್ಟು 10ನೇ ವರ್ಷದ ವರಮಹಾಲಕ್ಷ್ಮಿ ಪೂಜೆ- ಕಹಳೆ ನ್ಯೂಸ್

ಪುತ್ತೂರು:

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ವೃತ ಪೂಜಾ ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು-ಸ್ವಸಹಾಯ ಸಂಘಗಳ ಕೊಡಿಮ್ಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಮತ್ತು ಶಾಂತಿನಗರ ಒಕ್ಕೂಟಗಳ ಸಹಯೋಗದೊಂದಿಗೆ 10ನೇ ವರ್ಷದ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಿನ್ನೆ ಆ.16ರಂದು ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ನಡೆಯಿತು. ಬೆಳಿಗ್ಗೆ ಕಲಶ ಪ್ರತಿಷ್ಠೆ, ಮಂಗಳಾರತಿ ಹಾಗೂ ಲಲಿತಾ ಸಹಸ್ತ್ರನಾಮ ಪಾರಾಯಣ ನಡೆಯಿತು ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಮದ್ಯಾಹ್ನದ ನಂತರ ಸಭಾಕಾರ್ಯಕ್ರಮ ನಡೆಯಿತು. ಈ ವೇಳೆ ನಿರಂಜನ್ ರೈ ಹಾಗೂ ಇನ್ನರ್ ವೀಲ್ ಅಧ್ಯಕ್ಷೆ ಸಹನಾ ಭಾವಿನ್ ಮತ್ತು ಕ್ಲಬ್ ನ ಇತರ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು