Recent Posts

Sunday, January 19, 2025
ಸುದ್ದಿ

ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಹೊಯಿತು ಸ್ಯಾಟಲೈಟ್ ಕರೆ –ಕಹಳೆ ನ್ಯೂಸ್

ಬೆಳ್ತಂಗಡಿ: ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸ್ಯಾಟಲೈಟ್ ಕರೆಗಳು ಮಾಡಿರುವ ಆಘಾತಕಾರಿ ಮಾಹಿತಿ ವರದಿಯಾಗಿದೆ. ದೆಹಲಿಯಲ್ಲಿ ಸಿಕ್ಕಿದ ಉಗ್ರನೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದ್ದು. ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಗೋವಿಂದೂರು ಎಂದು ಹೇಳಲಾದ ಊರಿನಿಂದ ಸ್ಯಾಟಲೈಟ್ ಕರೆ ಹೋಗಿರುವ ಕುರಿತು ಬಾಯಿ ಬಿಟ್ಟಿದ್ದ ಎಂದು ವರದಿಯಾಗಿದೆ.

ಈ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ಅಧಿಕಾರಿಗಳು ಕರೆಗಳ ಕುರಿತು ತನಿಖೆ ನಡೆಸಿದಾಗ ಕರೆ ಹೋಗಿರುವುದು ಬೆಳ್ತಂಗಡಿ ತಾಲೂಕಿನ ಆಸುಪಾಸಿನಿಂದ ಎಂದು ಖಚಿತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು