ಬೆಳ್ತಂಗಡಿ ಕಕ್ಕೀಂಜೆಯ ಅಡಿಮಾರ್ ಸೇತುವೆ ಸ್ಥಳಕ್ಕೆ ಶಾಸಕ ಹರೀಶ್ ಕುಮಾರ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭೇಟಿ- ಕಹಳೆ ನ್ಯೂಸ್
ಬೆಳ್ತಂಗಡಿ: ಜಿಲ್ಲೆಯಾದ್ಯಂತ ಉಂಟಾದ ಭಾರೀ ಮಳೆಯಿಂದ ಇಡೀ ಜಿಲ್ಲೆಯೇ ಪ್ರವಾಹಕ್ಕೆ ಒಳಗಾಗಿತ್ತು. ಈ ಹಿನ್ನಲೆಯಲ್ಲಿ ಕೊಚ್ಚಿ ಹೋದ ಬೆಳ್ತಂಗಡಿ ಕಕ್ಕೀಂಜೆಯ ಅಡಿಮಾರ್ ಸೇತುವೆಯನ್ನು ಶಾಸಕ ಹರೀಶ್ ಕುಮಾರ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಸೇತುವೆಯ ಒಂದು ಕೀ. ಮಿ. ಅಂತರದಲ್ಲಿ ಪರಿಶಿಷ್ಟ ಪಂಗಡ ಕಾಲೋನಿ ಇದ್ದು ಶಾಲಾ ವಿಧ್ಯಾರ್ಥಿಗಳಿಗೆ ಮತ್ತು ವೃದ್ದರಿಗೆ ಆಸ್ಪತ್ರೆಗೆ ಸಂಚಾರಿಸಲು ಕಷ್ಟಕರವಾದ ಸಮಸ್ಯೆಗಳು ಎದುರಾಗಿರುತ್ತದೆ.
ಚಿಬಿದ್ರೆ ಹಾಗೂ ಚಾರ್ಮಾಡಿ ಎರಡು ಗ್ರಾಮಗಳ ಸಂಪರ್ಕ ಸೇತುವೆ ಕಡಿದು ಹೋದ ಹಿನ್ನಲೆ ಇದೀಗ ಸ್ಥಳೀಯ ಜನರಿಗೆ ದವಸಧಾನ್ಯಗಳನ್ನು ಪಡೆಯಲು ಪರ್ಯಾಯ ವ್ಯವಸ್ಥೆ ಇಲ್ಲದೆ ಸುಮಾರು ಇಪ್ಪತೈದು ಕಿ.ಮಿ ಸುತ್ತು ಬಳಸಿಕೊಂಡು ಬರುವುದರ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅತೀ ಶೀಘ್ರವಾಗಿ ಕಡಿದು ಹೋದ ಸಂಪರ್ಕ ಸೇತುವೆಯನ್ನು ತಾತ್ಕಾಲಿಕ ಮರು ಸಂಪರ್ಕ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲು ತಹಶಿಲ್ದಾರರಿಗೆ ಮೌಖಿಕವಾಗಿ ಅದೇಶಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಾಗರಾಜ್ ಎಸ್ ಲೃಣೋಜಲ, ದೇಜಪ್ಪ ಪೂಜಾರಿ, ಕಕ್ಕೀಂಜೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಇಂಬ್ರಾನ್, ಶಕೀಲ್ ಯುವ ಕಾಂಗ್ರೆಸ್ ಸದಸ್ಯ ನವಾಜ್ ವಕೀಲರು, ಅಲ್ಪಸಂಖ್ಯಾತ ಸಲಹೆಗಾರರು, ವಸಂತ್ ನಲೀಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.