Recent Posts

Monday, January 20, 2025
ಸುದ್ದಿ

ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ನೆರವು- ಕಹಳೆ ನ್ಯೂಸ್

ಧರ್ಮಸ್ಥಳ: ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿರುವ ನೆರೆ ಸಂತ್ರಸ್ತರಿಗೆ ಎಲ್ಲೆಡೆಯಿಂದ ಬದುಕು ಕಟ್ಟಿಕೊಳ್ಳಲು ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಈ ಹಿನ್ನಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ನೆರೆ ಸಂತ್ರಸ್ಥರಿಗೆ ನೆರೆವಿನ ಹಸ್ತ ನೀಡಿದ್ದಾರೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ರಾಜ್ಯದ ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋ.ರೂ ಹೆಗ್ಗಡೆಯವರು ಘೋಷಣೆ ಮಾಡಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶ್ರಮಿಕ ಕಾಳಜಿಯ ರಿಲೀಫ್ ಫಂಡ್ ಗೆ 50 ಲಕ್ಷ ರೂಪಾಯಿಯನ್ನು ಶಾಸಕರ ಮೂಲಕ ಹಸ್ತಾಂತರ ಮಾಡಿದ್ದಾರೆ. ಪಶ್ಚಿಮಘಟ್ಟ ಅಧ್ಯಯನ ಪೀಠ ಸ್ಥಾಪನೆಗೆ 2 ಕೋಟಿ ರೂ. ಮೀಸಲಾಗಿಸಿದ್ದಾರೆ. ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ ಮಾಡಿ 2 ಲಕ್ಷ ಸದಸ್ಯರಿಗೆ ತರಬೇತಿ ನೀಡುವುದೆಂದು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಡಾ.ಎಲ್.ಎಚ್. ಮಂಜುನಾಥ್ ಉಪಸ್ಥಿತರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು