Recent Posts

Monday, January 20, 2025
ಸುದ್ದಿ

ಪಳ್ಳತ್ತಡ್ಕ ಹೊಸಮ್ಮ ಸನ್ನಿಧಿಯಲ್ಲಿ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ- ಕಹಳೆ ನ್ಯೂಸ್

ಪಳ್ಳತ್ತಡ್ಕ: ಸತತ ಮೂರು ವರುಷಗಳಿಂದ ಪಳ್ಳತಡ್ಕ ಹೊಸಮ್ಮ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ವಿಜೃಂಭಣೆಯಿಂದ ನಡೆದು ಬರುತ್ತಿದ್ದು ಈ ವರ್ಷದ ನಾಲ್ಕನೇ ಅವಧಿಯ ಕ್ರೀಡೋತ್ಸವ ಬರುವ ಸೆಪ್ಟೆಂಬರ್ 1ನೇ ತಾರಿಕಿನಂದು ಪಳ್ಳತಡ್ಕದ ಹೊಸಮ್ಮ ದೈವಸ್ಥಾನದ ವಠಾರದ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಶ್ರೀ ಹೊಸಮ್ಮ ದೇವರಿಗೆ ಸಂಕ್ರಮಣದ ವಿಶೇಷ ಪೂಜೆಯನ್ನು ಮಾಡಿ ಯುವವಾಹಿಣಿಯ ಕೇಂದ್ರ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ಪಳ್ಳತಡ್ಕ ಹೊಸಮ್ಮ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹೊಸಮ್ಮ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಬಲಜ್ಜ, ದೈವಸ್ಥಾನದ ಕಾರ್ಯದರ್ಶಿ ಗೋಪಾಲಕೃಷ್ಣ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದ್ಯಮಿ ಜಯಂತ್ ನಡುಬೈಲು, ಶ್ರೀ ಕೃಷ್ಣ ಜನ್ಮಾಷ್ಟಮಿ 2019ರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಪಳ್ಳತಡ್ಕ, ಉಪಾಧ್ಯಕ್ಷ ದಿವಾಕರ ಪೂಜಾರಿ ಪಳ್ಳತಡ್ಕ, ಕ್ರೀಡೋತ್ಸವದ ಸಂಚಾಲಕ ದಿನೇಶ್ ಕೇಪು, ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪಳ್ಳತಡ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು.