Monday, January 20, 2025
ಸುದ್ದಿ

ವಿಜೃಂಭಣೆಯಿಂದ ನಡೆಯಿತು ರಾಯರ ಮಧ್ಯಾರಾಧನೆ – ಕಹಳೆ ನ್ಯೂಸ್

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನಡೆಯಿತು.

ಸಂಪ್ರದಾಯದಂತೆ ಈ ವರ್ಷವೂ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತ್ರಗಳನ್ನು ಟಿಟಿಡಿ ಅಧಿಕಾರಿಗಳು ರಾಯರ ಮಠಕ್ಕೆ ತಂದರು. ಮುಖ್ಯ ದ್ವಾರದಿಂದ ಮಠದವರೆಗೆ ಅದ್ಧೂರಿ ಮೆರ ವಣಿಗೆ ಮೂಲಕ ಶೇಷವಸ್ತ್ರಗಳನ್ನು ಬರ ಮಾಡಿಕೊಳ್ಳಲಾಯಿತು. ನಂತರ, ಮಠದ ಪೀಠಾಧಿಪತಿಗಳು ಅವುಗಳನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ, ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಿಸಿದರು. ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ವಿವಿಧ ಬಗೆಯ ಹಣ್ಣುಗಳಿಂದ ಅಭಿಷೇಕ ಮಾಡಲಾಯಿತ್ತು. ಈ ವೇಳೆ ಮಠದ ಪ್ರಾಂಗಣದಲ್ಲಿ ಬೃಹದಾಕಾರದ ಎಲ್‍ಇಡಿ ಪರದೆಗಳಲ್ಲಿ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರು ಅಲ್ಲಿಂದಲೇ ಅಭಿಷೇಕದ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು