Tuesday, January 21, 2025
ಸುದ್ದಿ

ಅರಣೆಪಾದೆ ಎಂಬಲ್ಲಿ ಸ್ವಚ್ಚತಾ ಕಾರ್ಯ : ಕಾಂಚನ-ಶಾಂತಿನಗರದ ಉತ್ಸಾಹಿ ಸ್ವಯಂಸೇವಕರ ತಂಡದಿಂದ ಮನೆಗಳ ಸ್ವಚ್ಚತೆ – ಕಹಳೆ ನ್ಯೂಸ್

ಬೆಳ್ತಂಗಡಿ : ಮಹಾ ಮಳೆಗೆ ಬೆಳ್ತಂಗಡಿ ಜನತೆ ತತ್ತರಿಸಿದ್ದಾರೆ. ಅನೇಕರು ಮನೆ ಆಸ್ತಿ ಕಳೆದುಕೊಂಡಿದ್ದಾರೆ. ಜೀವನೋಪಾಯಕ್ಕೆ ಎಂದು ಇದ್ದ ತೋಟವನ್ನು ಪ್ರವಾಹ ನುಂಗಿ ಹಾಕಿದೆ. ಹೀಗಾಗಿ ಸಂತ್ರಸ್ಧರಿಗೆ ಅನೇಕರು ಸಹಾಯ ಹಸ್ತವನ್ನ ಚಾಚುತ್ತಿದ್ದಾರೆ.

ಇನ್ನು ಪ್ರವಾಹದಿಂದಾಗಿ ಕೆಲವರ ಮನೆಯೊಳಗೆ ನೀರು ನುಗ್ಗಿದ್ದು ಸಂಘ ಸಂಸ್ಧೆಗಳು ಸ್ವಚ್ಚತಾ ಕಾರ್ಯಕ್ಕೆ ಶ್ರವಿಸಿದ್ದಾರೆ. ಅಂತೆಯೇ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ನೆರೆಪೀಡಿತ ಪ್ರದೇಶವಾದ ಅರಣೆಪಾದೆ ಎಂಬಲ್ಲಿ, ಕಾಂಚನ-ಶಾಂತಿನಗರದ ಉತ್ಸಾಹಿ ಸ್ವಯಂಸೇವಕರ ತಂಡವು ಮನೆಗಳ ಸ್ವಚ್ಛತಾ ಕಾರ್ಯವನ್ನು, ಶ್ರಮದಾನದ ಮೂಲಕ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು