Tuesday, January 21, 2025
ರಾಜಕೀಯ

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಹಿರಿಯ ಶಾಸಕರಿಗೆ ಬಿಗ್ ಶಾಕ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಬಿಜೆಪಿ ನೇತೃತ್ವದ ಸಚಿವ ಸಂಪುಟ ರಚನೆಗೆ ನಾಳೆ ಮುಹೂರ್ತ ಫಿಕ್ಸ್ ಆಗಿದೆ. ಇಂದು ಸಂಜೆ ಸಚಿವರ ಪಟ್ಟಿಯನ್ನು ಫೈನಲ್ ಮಾಡಲಿರುವ ಬಿಜೆಪಿ ಹೈಕಮಾಡ್, ಸಂಜೆಯೊಳಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪಟ್ಟಿಯನ್ನು ರವಾನಿಸಲಿದೆ. ಇಂತಹ ಪಟ್ಟಿಯಲ್ಲಿ ಹಳೆಯ ಮುಖಗಳಿಗೆ ಕೋಕ್ ನೀಡಲಿರುವ ಹೈಕಮಾಂಡ್, ಹೊಸ ಮುಖಗಳಿಗೆ ಮಣೆ ಹಾಕಲಿದೆಯಂತೆ. ಈ ಮೂಲಕ ರಾಜ್ಯದ ಹಿರಿಯ ಬಿಜೆಪಿ ಶಾಸಕರಿಗೆ ಬಿಗ್ ಶಾಕ್ ಕೊಡಲಿದೆ.

ಅಂತೂ ಇಂತೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ನಾಳೆ ಬೆಳಿಗ್ಗೆ 10.30ಕ್ಕೆ ರಚನೆಯಾಗಲಿದೆ. ಇಂತಹ ಮೊದಲ ಸಚಿವ ಸಂಪುಟ ರಚನೆಯಲ್ಲಿ 18ರಿಂದ 20 ಶಾಸಕರು ಸಚಿವ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಚಿವರು ನಾಳೆ ಬೆಳಿಗ್ಗೆ ನಡೆಯಲಿರುವ ರಾಜಭವನದ ಸಚಿವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯ ಸಚಿವ ಸಂಪುಟದಲ್ಲಿ ಪಕ್ಷೇತರ ಶಾಸಕ ಹೆಚ್ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡೋದು ಫಿಕ್ಸ್ ಆಗಿದ್ದೂ, ಬಿಎಲ್ ಸಂತೋಷ್ ಮೂಲಕ ಸಚಿವರ ಫೈನಲ್ ಪಟ್ಟಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೈಗೆ ಇಂದು ಸಂಜೆಯ ಒಳಗೆ ತಲುಪಲಿದೆ. ಹೀಗಾಗಿ ಇನ್ನೂ 2-3 ಗಂಟೆಯಲ್ಲಿಯೇ ಬಿಜೆಪಿ ನೇತೃತ್ವದ ಸರ್ಕಾರ ಸೇರಲಿರುವ ಶಾಸಕರ ಹೆಸರುಗಳು ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು